ವಿಭಜನೆ ವೇಳೆ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದ ಮುಸ್ಲಿಮರಿಂದ ಮೋದಿಗೆ ಮನವಿ

By Suvarna Web DeskFirst Published Mar 23, 2017, 11:09 AM IST
Highlights

"ಉರ್ದು ಭಾಷಿಕರಾದ ಈ ಮುಜಾಹಿರ್'ಗಳು ನಿಮ್ಮದೇ ಸ್ವಂತ ಜನರು. ನೀವು ಎಲ್ಲಾ ಅಂತಾರಾಷ್ಟ್ರೀಯ ಹಾಗೂ ಮಾನವ ಹಕ್ಕು ವೇದಿಕೆಗಳಲ್ಲಿ ಧ್ವನಿ ಎತ್ತಬೇಕು" ಎಂದು ಎಂಕ್ಯೂಎಂ ಮುಖಂಡ ಮನವಿ ಮಾಡಿಕೊಂಡಿದ್ದಾರೆ.

ಲಂಡನ್(ಮಾ. 23): ಪಾಕಿಸ್ತಾನದಲ್ಲಿರುವ ಅಸಹಾಯಕರಿಗೆ ನರೇಂದ್ರ ಮೋದಿ ಭರವಸೆಯ ಕಿರಣವಾಗಿದ್ದಾರೆ. ಬಲೂಚಿಗಳ ನಂತರ ಇದೀಗ ಮುಹಾಜಿರ್'ಗಳು ಭಾರತದ ಪ್ರಧಾನಿಯ ನೆರವು ಯಾಚಿಸಿದ್ದಾರೆ. "ಪಾಕಿಸ್ತಾನದಿಂದ ಪಾಕ್ ಸೇನೆಯಿಂದ ದೌರ್ಜನ್ಯಕ್ಕೊಳಗಾಗಿರುವ ಬಲೂಚಿಸ್ತಾನ್ ಜನರ ಪರವಾಗಿ ಮಾತನಾಡುವ ನರೇಂದ್ರ ಮೋದಿ, ತಮ್ಮದೇ ನಾಡಿನಿಂದ ವಲಸೆ ಹೋಗಿರುವ ಮುಹಾಜಿರ್'ಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?" ಎಂದು ಪಾಕಿಸ್ತಾನದ ಮುತ್ತಾಹಿದಾ ಖ್ವಾಮಿ ಮೂವ್ಮೆಂಟ್(ಎಂಕ್ಯೂಎಂ) ಪಕ್ಷದ ಮುಖಂಡ ಅಲ್ತಾಫ್ ಹುಸೇನ್ ಪ್ರಶ್ನಿಸಿದ್ದಾರೆ.

ಈಗಲೂ ನಾವು ಪರಕೀಯರು:
"ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋಗಲು ನಮ್ಮ ಪೂರ್ವಜರು ಕೈಗೊಂಡ ನಿರ್ಧಾರ ಒಂದು ದೊಡ್ಡ ಪ್ರಮಾದ. ನಾವು ಪಾಕಿಸ್ತಾನದಲ್ಲೇ ಹುಟ್ಟಿದರೂ ಇಲ್ಲಿನ ಮಣ್ಣಿನ ಮಕ್ಕಳೆನಿಸಲಿಲ್ಲ, ಪಾಕಿಸ್ತಾನೀಯರೆಂದು ನಮ್ಮನ್ನು ಪರಿಗಣಿಸಿಯೇ ಇಲ್ಲ. ಭಾರತದ ಪ್ರಧಾನಿಗಳೇ, ಈ ಮುಹಾಜಿರ್'ಗಳ ವಿರುದ್ಧ ಪಾಕಿಸ್ತಾನದ ಸರಕಾರ, ಸೇನೆ ಮತ್ತು ಅರೆಸೇನಾ ಪಡೆಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ನೀವು ಧ್ವನಿ ಎತ್ತಬೇಕಿತ್ತು. ಉರ್ದು ಭಾಷಿಕರಾದ ಈ ಮುಜಾಹಿರ್'ಗಳು ನಿಮ್ಮದೇ ಸ್ವಂತ ಜನರು. ನೀವು ಎಲ್ಲಾ ಅಂತಾರಾಷ್ಟ್ರೀಯ ಹಾಗೂ ಮಾನವ ಹಕ್ಕು ವೇದಿಕೆಗಳಲ್ಲಿ ಧ್ವನಿ ಎತ್ತಬೇಕು" ಎಂದು ಎಂಕ್ಯೂಎಂ ಮುಖಂಡ ಮನವಿ ಮಾಡಿಕೊಂಡಿದ್ದಾರೆ.

ಮುಜಾಜಿರ್'ಗಳು ಪಾಕಿಸ್ತಾನದಾದ್ಯಂತ ನೆಲಸಿದ್ದಾರಾದರೂ ಕರಾಚಿಯಲ್ಲಿ ಹೆಚ್ಚಾಗಿದ್ದಾರೆನ್ನಲಾಗಿದೆ. ಇದೀಗ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿರುವ ಎಂಕ್ಯೂಎಂ ಮುಖಂಡ ಅಲ್ತಾಫ್ ಹುಸೇನ್ ಅವರು ಪಾಕಿಸ್ತಾನದಿಂದ ಗಡೀಪಾರಾಗಿದ್ದು ಲಂಡನ್'ನಲ್ಲಿ ನೆಲಸಿದ್ದಾರೆ.

ಮಾ. 24ರಂದು ದಾಳಿ ಮಾಡುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಯೋಗಿ ಆದಿತ್ಯನಾಥ್'ಗೆ ಐಸಿಸ್ ಚಾಲೆಂಜ್

click me!