
ಸಂಸದ ರಾಜೀವ್ ಚಂದ್ರಶೇಖರ್ ಮೋದಿ ಸರ್ಕಾರ ಮಂಡಿಸಿರುವ ಮಧ್ಯುಂತರ ಬಜೆಟ್ ಕುರಿತಾಗಿ ಪ್ರತಿಕ್ರಿಯಿಸಿದ್ದು, ಭಾರತ ರೂಪಿಸುವ ಬದ್ಧತೆ ಸ್ಪಷ್ಟವಾಗಿದೆ ಎಂದಿದ್ದಾರೆ.
ಬಜೆಟ್ ಮಂಡನೆಯ ಬಳಿಕ ಪ್ರತಿಕ್ರಿಯಿಸಿದ ಸಂಸದ ರಾಜೀವ್ ಚಂದ್ರಶೇಖರ್ "ಮಧ್ಯಂತರ ಬಜೆಟ್ ರೈತರು, ಮಧ್ಯಮ ವರ್ಗ ಮತ್ತು ಅಸಂಘಟಿತ ವಲಯಕ್ಕೆ ನೆರವಾಗಿದೆ. ಬಡವರಿಗಾಗಿ ಘೋಷಿಸಿದ್ದ ಅನೇಕ ಯೋಜನೆಗಳ ಭಾರ ಹೊತ್ತಿದ್ದ ಮಧ್ಯಮ ವರ್ಗಕ್ಕೆ ನಿರಾಳತೆಯನ್ನು ನೀಡಲಾಗಿದೆ. ಕಡಿಮೆ ತೆರಿಗೆ ದರ ಹೊಂದಿರುವ ದೇಶವನ್ನಾಗಿ ಭಾರತವನ್ನು ರೂಪಿಸುವ ಬದ್ಧತೆ ಈ ಬಜೆಟ್‌ನಲ್ಲಿ ಸ್ಪಷ್ಟವಾಗಿದೆ. 2014ರಲ್ಲಿ ಮೋದಿ ಸರ್ಕಾರ ರೂಪಿಸಿಕೊಂಡಿದ್ದ ನೀಲ ನಕಾಶೆಯ ಸ್ಪಷ್ಟ ಮುಂದುವರಿಕೆ ಈ ಬಜೆಟ್. ಹೆಚ್ಚು ಸ್ಪರ್ಧಾತ್ಮಕತೆ, ದಕ್ಷತೆ, ಸ್ವಚ್ಛ ಆರ್ಥಿಕತೆಯನ್ನಾಗಿ ಮಾರ್ಪಾಡಿಸಿದೆ ಹೆಚ್ಚಿನ ಅಭಿವೃದ್ಧಿ ದರ ಸಾಧಿಸಬಹುದು ಎಂಬುದರ ದ್ಯೋತಕ" ಎಂದಿದ್ದಾರೆ.
ಅಲ್ಲದೇ ’ಸಮೃದ್ಧ ಭಾರತವನ್ನು ತೆರಿಗೆದಾರ ಹಣದಿಂದ ಬದುಕುವ ಒಂದು ದಿನವೂ ಕೆಲಸ ಮಾಡದ ಅಪ್ರಾಮಾಣಿಕ ವಂಶ ಪಾರಂಪರ್ಯದ ಆಡಳಿತಗಾರರಿಂದ ಕಟ್ಟಲು ಸಾಧ್ಯವಿಲ್ಲ. ಬಡತನ ಅನುಭವಿಸಿದ, ಸಂಕಷ್ಟ ಎದುರಿಸಿದ ಆದರೆ ಎಲ್ಲ ಭಾರತೀ ಯರಿಗೂ ಸುಂದರ ಭವಿಷ್ಯ ಕಲ್ಪಿಸುವ ಬದ್ಧತೆ ಇದ್ದವರಿಗೆ ಮಾತ್ರ ಸಾಧ್ಯ. 2014ರಲ್ಲಿ ಜನರು ಭಾರತವನ್ನು ಪರಿವರ್ತಿಸಲು, ದಶಕಗಳ ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸಲು, ದುರಾಡಳಿತ ಮತ್ತು ನಿಸ್ತೇಜ ಪಾಲಿಸಿಗಳಿಂದ ದೇಶವನ್ನು ಕಾಪಾಡಲು ಮತದಾನ ಮಾಡಿದ್ದರು’ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ