
ಬೆಂಗಳೂರು (ಮಾ. 05): ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯೋತ್ಪಾದಕ. ಸಿಎಂ ಭಯವನ್ನು ಉತ್ಪಾದನೆ ಮಾಡುತ್ತಿದ್ದಾರೆ. ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಆದ್ರೂ ಸುಮ್ಮನಿದ್ದಾರೆ ಎಂದು ಸುರಕ್ಷಾ ಸಮಾವೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಅಲ್ಪಸಂಖ್ಯಾಕರ ತುಷ್ಟೀಕರಣ ಮೂಲಕ ರಾಜಕೀಯ ಮಾಡ್ತಿರೋ ಸಿದ್ದರಾಮಯ್ಯ ಭಯೋತ್ಪಾದಕ ಅಲ್ಲದೇ ಇನ್ನೇನು? ತುಳುನಾಡಿನಲ್ಲಿ ಮಾರಿ ಓಡಿಸುವ ಒಂದು ಸಂಪ್ರದಾಯಿಕ ಹಬ್ಬವಿದೆ. ಅದರಂತೆ ಇಂದು ಜಿಲ್ಲೆಯಲ್ಲಿ ಮೂರು ಮಾರಿಗಳನ್ನು ಓಡಿಸಲು ಯಾತ್ರೆ ಸಾಗಿದೆ. ಒಂದು ಕಾಂಗ್ರೆಸ್ ಮಾರಿ, ಇನ್ನೊಂದು ಸಿದ್ದರಾಮಯ್ಯ ಎನ್ನುವ ಮಾರಿ ಮತ್ತೊಂದು ಬಂಟ್ವಾಳದ ಶಾಸಕ ರಮಾನಾಥ್ ರೈ ಎಂಬ ಮಾರಿ. ಈ ಮೂರು ಮಾರಿಗಳನ್ನ ಕೇರಳಕ್ಕೆ ಓಡಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ನಳೀನ್ ಕುಮಾರ್ ವಿಡಂಬನೆ ಮಾಡಿದ್ದಾರೆ.
ರಾಜ್ಯದಲ್ಲಿ ಇಬ್ಬರು ಸುಲ್ತಾನರಿದ್ದಾರೆ. ಒಬ್ಬ ಸಿದ್ದು ಸುಲ್ತಾನ್ ಇನ್ನೊಬ್ಬ ರಮಾನಾಥ್ ರೈ. ಬಿಹಾರದ ಬಳಿಕ ಕರ್ನಾಟಕ ಜಂಗಲ್ ರಾಜ್ಯವಾಗಿದೆ. ಜಂಗಲ್ ರಾಜ್ಯ ಮಾಡಿದ ಲಾಲು ಪ್ರಸಾದ್ ಜೈಲಿನೊಳಗಡೆ ಇದ್ದಾರೆ. ಬರುವ ವರ್ಷ ಸಿದ್ದರಾಮಯ್ಯ ಕೂಡಾ ಜೈಲಲ್ಲಿರುತ್ತಾರೆ. ದತ್ತಪೀಠವನ್ನ ಇಸ್ಲಾಮೀಕರಣ ಮಾಡುವ ಷಡ್ಯಂತ್ರಕ್ಕೂ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಇದು ನಿಮ್ಮ ಕೊನೆಯ ಅವತಾರ.ಇನ್ನು ಮೂರು ತಿಂಗಳಲ್ಲಿ ಕಾಂಗ್ರೆಸ್ ಅಂತ್ಯ ಸಂಸ್ಕಾರವಾಗುತ್ತೆ ಎಂದು ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.