
ಬೆಂಗಳೂರು (ಮಾ. 05): ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಮನೋಹರ್ ಪರ್ರಿಕರ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಇಂದು ಸಂಜೆ ಖಾಸಗಿ ವಿಮಾನದಲ್ಲಿ ಮನೊಹರ್ ಪರ್ರಿಕರ್ ಅಮೇರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ.
ಅವರು ಚೇತರಿಸಿಕೊಳ್ಳುವವರೆಗೆ ಅವರ ಅನುಪಸ್ಥಿತಿಯಲ್ಲಿ ಆಡಳಿತ ನಡೆಸಲು ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಬಿಜೆಪಿಯ ಫ್ರಾನ್ಸಿಸ್ ಡಿಸೋಜಾ, ಎಂಜಿಪಿ ಪಕ್ಷದ ಸುದಿನ್ ಧವಲೀಕರ್ ಹಾಗೂ ಗೋವಾ ಫಾರ್ವರ್ಡ್’ನ ವಿಜಯ್ ಸರ್ದೇಸಾಯಿ ಈ ಸಮಿತಿಯಲ್ಲಿದ್ದಾರೆ. ಇಂದು ಸಂಜೆ ಹೊರಡುವ ಮುನ್ನ ಮನೋಹರ್ ಪರ್ರಿಕರ್ ಅಧಿಕೃತಗೊಳಿಸಲಿದ್ದಾರೆ.
ಮುಖ್ಯಮಂತ್ರಿ ಪರ್ರಿಕರ್ ಕೈಗಾರಿಕೆ, ಶಿಕ್ಷಣ, ಪರಿಸರ, ಹಣಕಾಸು ಮತ್ತು ಗೃಹ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ತುರ್ತು ಕೆಲಸವಿದ್ದರೆ ತ್ರಿ ಸದಸ್ಯ ಸಮಿತಿ ಇದನ್ನು ನಿಭಾಯಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.