ಕೇಂದ್ರ ನೀಡುತ್ತಿರುವ ಅಕ್ಕಿಯನ್ನು ರಾಜ್ಯ ಸರ್ಕಾರ ಮಾರಿಕೊಂಡು ತಿನ್ನುತ್ತಿದೆ: ಶೋಭಾ ವಾಗ್ದಾಳಿ

By Suvarna Web DeskFirst Published Mar 5, 2018, 1:26 PM IST
Highlights

ರಾಜ್ಯದ ಜನತೆಗೆ ಅಕ್ಕಿ ನೀಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಸಿದ್ದರಾಮಯ್ಯ ಮಾರಿಕೊಂಡು ತಿನ್ನುತ್ತಿದ್ದಾರೆ. ಪ್ರತಿ ತಿಂಗಳೂ 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ, ಗೋಧಿ ರಾಜ್ಯಕ್ಕೆ ಬರುತ್ತಿದೆಯಾದರೂ ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು : ರಾಜ್ಯದ ಜನತೆಗೆ ಅಕ್ಕಿ ನೀಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಸಿದ್ದರಾಮಯ್ಯ ಮಾರಿಕೊಂಡು ತಿನ್ನುತ್ತಿದ್ದಾರೆ. ಪ್ರತಿ ತಿಂಗಳೂ 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ, ಗೋಧಿ ರಾಜ್ಯಕ್ಕೆ ಬರುತ್ತಿದೆಯಾದರೂ ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಚೀಲದಲ್ಲಿನ ಅಕ್ಕಿ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದ್ದು, ಚೀಲದ ಮೇಲೆ ಸ್ಟಿಕ್ಕರ್ ಮತ್ತು ಬ್ರ್ಯಾಂಡ್ ಸಿದ್ದರಾಮಯ್ಯ ನವರದ್ದಾಗಿದೆ ಎಂದು ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು. ರಾಜ್ಯ ಇಂಧನ ಇಲಾಖೆಗೆ ಎಲ್‌ಇಡಿ ಬಲ್ಬ್ ಕೊಟ್ಟಿದ್ದು ಕೇಂದ್ರ ಬಿಜೆಪಿ ಸರ್ಕಾರ. ಆದರೆ, ಬ್ರ್ಯಾಂಡ್ ಮೆರೆಯುತ್ತಿರುವುದು ರಮ್ಯಾ.

ಪ್ರತಿ ಯೋಜನೆಗೂ ಕೇಂದ್ರ ಹಣ ಕೊಡುತ್ತಿದ್ದರೆ, ರಾಜ್ಯ ಸರ್ಕಾರ ಅದಕ್ಕೆ ತಮ್ಮ ಹೆಸರಿಟ್ಟುಕೊಂಡು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

click me!