ರಾಜಕಾರಣಿಗಳು, ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿದ್ದ ಮಧ್ಯಪ್ರದೇಶದ ಸೆಕ್ಸ್ ರಾಕೆಟ್ ತಂಡ ಈ ವಿಡಿಯೋಗಳನ್ನಿಟ್ಟುಕೊಂಡು 2019ರ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ರಾಜಕಾರಣಿಗಳ ಸುಲಿಗೆಗೆ ಯತ್ನಿಸಿತ್ತು ಎಂಬ ವಿಚಾರ ತನಿಖೆ ವೇಳೆ ಬಯಲಿಗೆ ಬಂದಿದೆ.
ಬೆಂಗಳೂರು [ಅ.02]: ದೇಶದಲ್ಲೇ ಅತೀ ದೊಡ್ಡ ಹಾನಿಟ್ರ್ಯಾಪ್ ದಂಧೆ ಎಂದು ಹೇಳಲಾದ ಮಧ್ಯಪ್ರದೇಶದ ಭೋಪಾಲ್ ಹಾನಿಟ್ರ್ಯಾಪ್ ಪ್ರಕರಣದ ರಹಸ್ಯ ದಾಖಲೆಗಳನ್ನೆಲ್ಲಾ ಬೆಂಗಳೂರಿನಲ್ಲಿ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ ತಮ್ಮ ಬಲೆಗೆ ಬಿದ್ದ ಅಧಿಕಾರಿಗಳ ಫೋನ್ ಹಾಗೂ ಇತರ ವೈಯಕ್ತಿಕ ಮಾಹಿತಿಗಳನ್ನು ಕದಿಯಲು ಇದೇ ಕಂಪನಿಗೆ ಗುತ್ತಿಗೆ ನೀಡಿತ್ತು ಎಂಬುದು ಪತ್ತೆಯಾಗಿದೆ.
ವಿಡಿಯೋ ಸೇಲ್ ಗೆ ಯತ್ನ
undefined
ರಾಜಕಾರಣಿಗಳು, ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿದ್ದ ಮಧ್ಯಪ್ರದೇಶದ ಸೆಕ್ಸ್ ರಾಕೆಟ್ ತಂಡ ಈ ವಿಡಿಯೋಗಳನ್ನಿಟ್ಟುಕೊಂಡು 2019ರ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ರಾಜಕಾರಣಿಗಳ ಸುಲಿಗೆಗೆ ಯತ್ನಿಸಿತ್ತು ಎಂಬ ವಿಚಾರ ತನಿಖೆ ವೇಳೆ ಬಯಲಿಗೆ ಬಂದಿದೆ.
ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಬಹುದಾದ ಈ ಸೆಕ್ಸ್ ವಿಡಿಯೋಗಳನ್ನು ಚುನಾವಣೆ ಹೊತ್ತಲ್ಲಿ 30 ಕೋಟಿ ರು.ಗೆ ಮಾರಾಟ ಮಾಡಲು ಯತ್ನ ನಡೆಸಲಾಗಿತ್ತು. ಇದಕ್ಕಾಗಿ ರಾಜಕೀಯ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆಗಳು ಸಹ ನಡೆದಿದ್ದವು. ತಮ್ಮ ವಿರೋಧಿಗಳನ್ನು ಹೆಣೆಯಲು ಈ ವಿಡಿಯೋಗಳನ್ನು ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಓರ್ವ ರಾಜಕೀಯ ಮುಖಂಡ ಈ ವಿಡಿಯೋಗಳಿಗೆ 6 ಕೋಟಿ ರು. ನೀಡಲು ಮುಂದಾಗಿದ್ದ. ಆದರೆ, ಈ ಆಫರ್ ಅನ್ನು ಈ ದಂಧೆಯ ಪ್ರಮುಖ ಕಿಂಗ್‌ಪಿನ್ ಶ್ವೇತಾ ವಿಜಯ್ ಜೈನ್ ತಿರಸ್ಕರಿದ್ದಳು.
ಆದರೆ, ಲೋಕಸಭಾ ಚುನಾವಣೆಗೂ ಮುನ್ನ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಳಿಯಿದ್ದ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಕೈಗೆ ಜಾರಿದ್ದು, ಈ ಜಾಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ತಮ್ಮಿಂದ ಎಷ್ಟುಸಾಧ್ಯವಾಗುತ್ತದೆಯೋ ಅಷ್ಟುಹಣವನ್ನು ರಾಜಕೀಯ ನಾಯಕರಿಂದ ಬಾಚಿಕೊಳ್ಳಲು ಈ ದಂಧೆಯ ಇಬ್ಬರು ಮಹಿಳಾ ಕಿಂಗ್‌ಪಿನ್‌ಗಳು ಸಾಕಷ್ಟುಯತ್ನ ನಡೆಸಿದ್ದರು. ಈ ಪ್ರಕಾರ ಕೆಲವು ವಿಡಿಯೋಗಳನ್ನು ಕೆಲವರಿಗೆ ಕೆಲವು ಕೋಟಿ ರು.ಗಳಿಗೆ ಈ ಮಹಿಳೆಯರು ಮಾರಿದ್ದರು. ಆಗಿನಿಂದಲೂ ಪೊಲೀಸರು ಈ ದಂಧೆಯ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದರು.