ಸರ್ಕಾರಕ್ಕೆ ಲಾಟರಿಯಲ್ಲಿ 9200 ಕೋಟಿ ರೂ. ಜಾಕ್‌ಪಾಟ್‌!

By Web DeskFirst Published Oct 2, 2019, 8:35 AM IST
Highlights

ಸರ್ಕಾರಕ್ಕೆ ಲಾಟರೀಲಿ 9200 ಕೋಟಿ ಜಾಕ್‌ಪಾಟ್‌| 7.92 ಕೋಟಿ ಲಾಟರಿ ಟಿಕೆಟ್‌ಗಳ ಭರ್ಜರಿ ಮಾರಾಟ

ತಿರುವನಂತಪುರ[ಅ.02]: ಯಾವುದೇ ಒಂದು ಸರ್ಕಾರಕ್ಕೆ ಮದ್ಯ, ಸಿಗರೆಟ್‌ ಸೇರಿದಂತೆ ಇನ್ನಿತರ ವಸ್ತುಗಳ ಮೇಲಿನ ತೆರಿಗೆಗಳಿಂದ ಆದಾಯ ಹರಿದುಬರುತ್ತದೆ. ಆದರೆ, 2018-19ನೇ ಸಾಲಿನಲ್ಲಿ ಕೇರಳದ ಸರ್ಕಾರದ ಬೊಕ್ಕಸಕ್ಕೆ ಲಾಟರಿ ಟಿಕೆಟ್‌ಗಳ ಮಾರಾಟವೊಂದರಿಂದಲೇ ವಾರ್ಷಿಕ 9,276 ಕೋಟಿ ರು. ಆದಾಯ ಬಂದಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ದುಬೈನಲ್ಲಿ ಕೆಲಸ ಸಿಗದೆ ಮರಳಿದವನಿಗೆ ಹೊಡೀತು 27 ಕೋಟಿ ರು.ಲಾಟರಿ!

ಲಾಟರಿ ಟಿಕೆಟ್‌ ಮಾರಾಟದ ಮೇಲಿನ ತೆರಿಗೆ ವಿನಾಯ್ತಿಯಿಂದ ಈ ಪ್ರಮಾಣದಲ್ಲಿ ಶೇಖರಣೆಯಾಗಿರುವ ಈ ಹಣವನ್ನು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. 2011 ಜನಸಂಖ್ಯೆ ಸಮೀಕ್ಷೆ ಪ್ರಕಾರ ಕೇರಳದ ಜನಸಂಖ್ಯೆ 3.34 ಕೋಟಿ ಜನಸಂಖ್ಯೆಯಿದ್ದು, 2018-19ನೇ ಸಾಲಿನಲ್ಲಿ 7.92 ಲಾಟರಿ ಟಿಕೆಟ್‌ಗಳ ಮಾರಾಟದಿಂದ ಈ ಪ್ರಮಾಣದ ಆದಾಯ ಶೇಖರಣೆಯಾಗಿದೆ ಎಂಬುದು ಮತ್ತೊಂದು ಕುತೂಹಕಾರಿ ವಿಚಾರವಾಗಿದೆ.

2 ಕೋಟಿ ಲಾಟರಿ ಟಿಕೆಟ್ ಮರೆತಿದ್ದ ಪೊಲೀಸ್ ಪೇದೆ!

ಅಲ್ಲದೆ, 2017-18ನೇ ಸಾಲಿನಲ್ಲಿ ಲಾಟರಿಗಳ ಮಾರಾಟದಿಂದ 8,977 ಕೋಟಿ ರು. ಆದಾಯ ಬಂದಿದ್ದು, ಇದರಲ್ಲಿ 1673 ಕೋಟಿ ರು. ಲಾಭವಾಗಿತ್ತು. ಪ್ರಸ್ತುತ ವರ್ಷದಲ್ಲಿ ಲಾಟರಿಗಳಿಂದ 11,800 ಕೋಟಿ ರು. ಆದಾಯ ಬರುವ ನಿರೀಕ್ಷೆಯಿದೆ.

click me!