
ನವದೆಹಲಿ(ಡಿ.23): ಕುಡಿದು ವಾಹನ ಚಲಾಯಿಸಿ ಅಮಾಯಕರ ಸಾವಿಗೆ ಕಾರಣರಾಗುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸದಾಗಿ ಜಾರಿಗೊಳಿಸುತ್ತಿರುವ ನಿಯಮದ ಪ್ರಕಾರ ಕುಡಿದು ವಾಹನ ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣರಾದರೆ 7 ವರ್ಷ ಶಿಕ್ಷೆ ವಿಧಿಸಲಾಗುತ್ತದೆ.
ಈ ಮೊದಲು ಸಾರಿಗೆ ಇಲಾಖೆ ಕುಡಿದು ವಾಹನ ಚಲಾಯಿಸಿ ಹತ್ಯೆಗೆ ಕಾರಣರಾದವರಿಗೆ ಉದ್ದೇಶಪೂರಿತ ಹತ್ಯೆ ಎಂದು ಭಾವಿಸಿ 10 ವರ್ಷಗಳ ಜೈಲು ಶಿಕ್ಷೆಗೆ ಶಿಫಾರಸ್ಸು ಮಾಡಿತ್ತು. ಈಗ ನಿಯಮ ಮಾರ್ಪಡಿಸಿದ್ದು ಸೆಕ್ಷನ್ 304ಎ ಅಡಿ 7 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ದೇಶದ ಅರ್ಧದಷ್ಟು ದ್ವಿಚಕ್ರ ವಾಹನ ಮಾಲೀಕರ ಬಳಿ ತರ್ಡ್ ಪಾರ್ಟಿ ವಿಮೆಯಿಲ್ಲದ ಕಾರಣ ಮರಣ ಅಥವಾ ಸಾವು ಸಂಭವಿಸಿದರೆ ಪರಿಹಾರ ದೊರಕುವುದಿಲ್ಲ.
ಈ ಕಾರಣದಿಂದಾಗಿ ಎಲ್ಲ ವಾಹನಗಳು ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಹೊಂದಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಸಂಸದೀಯ ಆಯ್ದ ಸಮಿತಿಯು ಮೋಟಾರು ವಾಹನಗಳ(ತಿದ್ದುಪಡಿ)ಕಾಯಿದೆಯ ವರದಿಯನ್ನು ರಾಜ್ಯಸಭೆಗೆ ಸಲ್ಲಿಸಿದ್ದು, ಶೀಘ್ರದಲ್ಲೇ ಕಾಯೆದೆ ಜಾರಿಗೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.