(ವಿಡಿಯೋ)ಕರುಳು ಹಿಂಡುವ ದೃಶ್ಯ: ಸತ್ತು ಬಿದ್ದ ಅಮ್ಮನ ಮೃತದೇಹದಿಂದಲೇ ಮೊಲೆಹಾಲು ಕುಡಿದ ಹಸುಗೂಸು!

Published : May 25, 2017, 12:22 PM ISTUpdated : Apr 11, 2018, 12:36 PM IST
(ವಿಡಿಯೋ)ಕರುಳು ಹಿಂಡುವ ದೃಶ್ಯ: ಸತ್ತು ಬಿದ್ದ ಅಮ್ಮನ ಮೃತದೇಹದಿಂದಲೇ ಮೊಲೆಹಾಲು ಕುಡಿದ ಹಸುಗೂಸು!

ಸಾರಾಂಶ

ರೈಲಿನಡಿಗೆ ಸಿಲುಕಿ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದು, ಇವೆಲ್ಲದರ ಪರಿವೆಯಿಲ್ಲದ ಹಸುಳೆಯೊಂದು ಮೃತ ತಾಯಿಯ ಎದೆ ಹಾಲನ್ನು ಕುಡಿತ್ತಿರುವ ಮನಕಲುಕುವ ದೃಶ್ಯಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿವೆ.

ಭೋಪಾಲ್(ಮೇ.25): ರೈಲಿನಡಿಗೆ ಸಿಲುಕಿ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದು, ಇವೆಲ್ಲದರ ಪರಿವೆಯಿಲ್ಲದ ಹಸುಳೆಯೊಂದು ಮೃತ ತಾಯಿಯ ಎದೆ ಹಾಲನ್ನು ಕುಡಿತ್ತಿರುವ ಮನಕಲುಕುವ ದೃಶ್ಯಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿವೆ.

ಭೋಪಾಲ್'ನಿಂದ ಸುಮಾರು 250 ಕಿಲೋ ಮೀಟರ್ ದೂರದ ದಮೋಹ್ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ರೈಲು ಹಳಿ ಪಕ್ಕದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಈ ಸಂದರ್ಭದಲ್ಲಿ ಹಸಿವಿನಿಂದ ಕಂಗೆಟ್ಟ ಆಕೆಯ ಒಂದು ವರ್ಷದ ಗಂಡು ಮಗು ಮೃತ ತಾಯಿಯ ಎದೆ ಹಾಲನ್ನು ಕುಡಿಯುತ್ತಿದ್ದ ಮಲಕಲುಕುವ ದೃಶ್ಯ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ನೆರೆದಿದ್ದ ಕೆಲವರು ಈ ದೃಶ್ಯಗಳನ್ನು ಮೊಬೈಲ್'ನಲ್ಲಿ ಸೆರೆ ಹಿಡಿದಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮಹಿಳೆ ಚಲಿಸುತ್ತಿದ್ದ ರೈಲಿನಿಂದ ಕೆಳ ಬಿದ್ದಿರಬಹುದು ವೇಗವಾಗಿ ಬಂದ ರೈಲು ಆಕೆಗೆ ಡಿಕ್ಕಿ ಹೊಡೆದಿದೆ ಎಂದು ಶಂಕಿಸಿದ್ದಾರೆ. ಮಹಿಳೆಯ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಇನ್ನು ಸ್ಥಳಕ್ಕಾಗಮಿಸಿದ ತಜ್ಞರು ದುರಂತ ಸಂಭವಿಸಿದ ಕೆಲ ಕಾಲ ಆಕೆ ಜೀವವಿದ್ದು, ಈ ಸಂದರ್ಭದಲ್ಲಿ ಆಕೆ ತನ್ನ ಮಗುವಿಗೆ ಎದೆ ಹಾಲು ನೀಡಲು ಪ್ರಯತ್ನಿಸಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಇನ್ನು ಮಗುವನ್ನು ತಾಯಿಯ ಮೃತದೇಹದಿಂದ ದೂರ ತಂದಾಗ ಆ ಕಂದಮ್ಮನ ಆಕ್ರಂದನ ಪೊಲೀಸರನ್ನೇ ಭಾವುಕರನ್ನಾಗಿಸಿತ್ತಂತೆ. ಬಳಿಕ ಪೊಲೀಸರು ಕಂದಮ್ಮನನ್ನು ಚಿಕಿತ್ಸೆಗಘಾಇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಈ ಸಂದರ್ಭದಲ್ಲಿ ವೈದ್ಯರು ಮಗುವಿನ ಚಿಕಿತ್ಸೆಗೆ ಹಣ ಪಾವತಿಸುವವರು ಯಾರೂ ಇಲ್ಲ ಎಂದು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ವಾಋ್ಡ್ ಬಾಯ್ ಒಬ್ಬ ಹಣ ನೀಡಿ ಚಿಕಿತ್ಸೆ ಪ್ರಾರಂಭಿಸುವಂತೆ ಕೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಮೃತ ಮಹಿಳೆಯ ಕುಟುಂಬಸ್ಥರನ್ನು ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದ್ದು, ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಪೊಲೀಸರ ಬಳಿ ಕೇವಲ ಮೃತದೇಹದ ಬಳಿ ಪತ್ತೆಯಾದ ಪರ್ಸ್ ಮಾತ್ರ ಸುಳಿವಿನ ರೂಪದಲ್ಲಿ ಇದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು