
ಚಾಮರಾಜನಗರ(ಮೇ 25): ಸುವರ್ಣನ್ಯೂಸ್'ನ "ವನ್ಯಜೀವಿ ಸಂರಕ್ಷಿಸಿ" ವಿಶೇಷ ಅಭಿಯಾನದ ಮೂರನೇ ಹಂತ ಭರ್ಜರಿಯಾಗಿ ಸಾಗುತ್ತಿದೆ. ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲ ಗ್ರಾಮದಲ್ಲಿ ವನ್ಯಜೀವಿ ಸಂರಕ್ಷಣೆಯ ಮಹತ್ವದ ಕುರಿತು ಅಭಿಯಾನ ತಂಡದ ಸದಸ್ಯರು ಜನಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಹುತ್ತೂರು ಗ್ರಾಮಪಂಚಾಯಿತಿ ಮೊದಲಾದ ಸ್ಥಳಗಳಲ್ಲಿ ಅಭಿಯಾನದ ಭಿತ್ತಿಪತ್ರ, ಕರಪತ್ರಗಳನ್ನು ಹಂಚಲಾಯಿತು.
ಮೈಸೂರಿನ ಕಾಡುಗಳಂಚಿನ ಗ್ರಾಮಗಳಲ್ಲಿ ಸುವರ್ಣನ್ಯೂಸ್'ನ ಅಭಿಯಾನ ನಡೆಯುತ್ತಿದೆ. ಕಾಡುಪ್ರಾಣಿಗಳ ಸಂರಕ್ಷಣೆ, ಅರಣ್ಯ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸಿಕೊಡಲಾಗುತ್ತಿದೆ. ಕಾಡು ಉಳಿದರೆ ನಾಡು ಉಳಿದೀತು ಎಂಬ ಸಂದೇಶವನ್ನು ಜನರಿಗೆ ಮುಟ್ಟಿಸಲಾಗುತ್ತಿದೆ. ನಾಗರಹೊಳೆ, ಹೆಚ್.ಡಿ.ಕೋಟೆಯಲ್ಲಿನ ಗ್ರಾಮಗಳಲ್ಲಿ ಈಗಾಗಲೇ ಅಭಿಯಾನದ ಕಾರ್ಯ ನಡೆಸಲಾಗಿದೆ.
ರಾಜ್ಯದ ಅರಣ್ಯ ಇಲಾಖೆಯು ಸುವರ್ಣನ್ಯೂಸ್'ನ ಈ ಅಭಿಯಾನಕ್ಕೆ ವಿಶೇಷ ಬೆಂಬಲ ನೀಡಿದೆ. ನಟ ಪ್ರಕಾಶ್ ರೈ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇನ್ನೂ ಹಲವಾರು ಸ್ವಯಂಸೇವಾ ಸಂಸ್ಥೆಗಳು ಸುವರ್ಣನ್ಯೂಸ್'ನ ಈ ಕಾರ್ಯಕ್ಕೆ ಕೈಜೋಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.