
ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಹಿರಿಯ ಅಧಿಕಾರಿಯೊಬ್ಬರು, ‘ಸೇನೆ, ಪೊಲೀಸರು ಹಾಗೂ ಸಿಆರ್‌ಪಿಎಫ್ ಪಡೆಗಳು ಅಸ್ಸಾಂನಲ್ಲಿ ನಕಲಿ ಎನ್‌ಕೌಂಟರ್ ನಡೆಸಿದ್ದವು' ಎಂಬ ಸ್ಫೋಟಕ ವರದಿಯನ್ನು ಸಿಆರ್‌ಪಿಎಫ್ ಕೇಂದ್ರ ಕಚೇರಿಗೆ ರವಾನಿಸಿದ್ದಾರೆ. ಇದು ಭಾರೀ ಸಂಚಲನ ಮೂಡಿಸುವ ಸಾಧ್ಯತೆ ಇದೆ.
ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ರಜನೀಶ್ ರಾಯ್ ಅವರೇ ಈ ಆರೋಪ ಮಾಡಿದವರು. ಅವರೀಗ ಮೇಘಾಲಯದ ಶಿಲ್ಲಾಂಗ್ ಸಿಆರ್‌ಪಿಎಫ್‌ನಲ್ಲಿ ಈಶಾನ್ಯ ವಲಯ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಸ್ಸಾಂನ ಸಿಮಾಲ್‌ಗುರಿ ಎಂಬಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಸೋಂಗಬ್ಜಿತ್ (ಎನ್‌ಡಿಎಫ್‌ಬಿ-ಎಸ್) ಬಣದ ಇಬ್ಬರು ಶಂಕಿತ ಉಗ್ರರನ್ನು ಮಾ 29-30ರಂದು ಅವರಿದ್ದ ಡಿ-ಕಲಿಂಗ್ ಗ್ರಾಮದಿಂದ ಬಂಧಿಸಿ, ನಿಶ್ಶಸ್ತ್ರರಾಗಿದ್ದಾಗಲೇ ಈ ಪಡೆಗಳು ಸಾಯಿಸಿವೆ. ಬಳಿಕ ಇದಕ್ಕೆ ಎನ್‌ಕೌಂಟರ್ ಮಾಡಲಾಗಿದೆ ಬಣ್ಣ ಕಟ್ಟಲಾಗಿದೆ. ಸುಖಾಸುಮ್ಮನೇ ಶಂಕಿತ ಉಗ್ರರ ಶವದ ಮೇಲೆ ಬಂದೂಕು ಇರಿಸಿ ಅವರು ಭದ್ರತಾಪಡೆಗಳ ಮೇಲೆ ದಾಳಿ ಮಾಡಲು ಬಂದಿದ್ದರು ಎಂದು ಬಿಂಬಿಸಲಾಗಿದೆ.
ಈ ಬಗ್ಗೆ ತನಿಖೆ ಆಗಬೇಕು ಎಂದು ರಜನೀಶ್ ರಾಯ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.