
ಬೆಂಗಳೂರು, (ಸೆ.14): ನಿನ್ನೆ (ಗುರುವಾರ) ನಾಡಿನಾದ್ಯಂತ ಗಣೇಶ ಹಬ್ಬದ ಸಡಗರ, ಸಂಭ್ರಮ ಕಳೆಗಟ್ಟಿತ್ತು. ಅದರಂತೆ ಬೆಂಗಳೂರಿನ ಕುಟುಂಬವೊಂದು ಸಂಬಂಧಿಕರ ಮನೆಗೆ ಹೋಗಿ ಗಣೇಶ ಹಬ್ಬವನ್ನ ವಿಜೃಂಬಣೆಯಿಂದ ಆಚರಿಸಿ ಖುಷಿ ಖುಷಿಯಾಗಿದ್ದರು. ಆದರೆ, ಆ ಖುಷಿ ಬಹಳ ಹೊತ್ತು ಇರಲಿಲ್ಲ.
ರಘು, ಸುರೇಖಾ ಹಾಗೂ ಮಗಳು ಅರಾಧ್ಯ ಈ ಮೂವರು ಗಣೇಶ ಹಬ್ಬಕ್ಕೆಂದು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿ, ಪುನಃ ರಾತ್ರಿ ತಮ್ಮ ಮನೆಗೆ ಸ್ಕೂಟರ್‌ನಲ್ಲಿ ಹಿಂದಿರುಗುವಾಗ ಹೆಬ್ಬಾಳ ಬಳಿಯ ಲುಂಬಿಣಿ ಗಾರ್ಡನ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ.
ಈ ದುರ್ಘಟನೆಯಲ್ಲಿ ತಾಯಿ ಸುರೇಖಾ ಹಾಗೂ ಮಗಳು ಅರಾಧ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ರಘು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.