ಚುನಾವಣಾ ಫಲಿತಾಂಶದ ಬೆನ್ನಲ್ಲೇ ಹೊರಬಿದ್ದ ಸತ್ಯ : ವಾಮಮಾರ್ಗದಲ್ಲಿ ಸಿಕ್ತಾ ಜಯ?

By Web DeskFirst Published Sep 14, 2018, 1:42 PM IST
Highlights

ಚುನಾವಣಾ ಫಲಿತಾಂಶದ ಬೆನ್ನಲ್ಲೇ ಇದೀಗ ಸತ್ಯವೊಂದು ಹೊರಬಿದ್ದಿದ್ದು, ಚುನಾವಣಾ ಆಯೋಗವು ಇವಿಎಂ ಅನ್ನು ತಾವು ನೀಡಿಲ್ಲ ಎಂದು ಹೇಳಿದೆ. ಇದರಿಂದ ದಿಲ್ಲಿ ವಿವಿ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಎಬಿವಿಪಿ ವಾಮಮಾರ್ಗದ ಮೂಲಕ ಗೆಲುವು ಪಡೆಯಿತಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. 

ನವದೆಹಲಿ :  ದಿಲ್ಲಿ ವಿಶ್ವವಿದ್ಯಾಲಯದಲ್ಲಿ  ವಿದ್ಯಾರ್ಥಿ ಪರಿಷತ್ ಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ.  ಚುನಾವಣೆಯಲ್ಲಿ ಎಬಿವಿಪಿ ಮೂರು ಸ್ಥಾನಗಳಲ್ಲಿ ಗೆಲುವು ಪಡೆದಿದ್ದು, ಇದೀಗ ಇದರ ಬೆನ್ನಲ್ಲೇ ವಿವಾದವೊಂದು ಸೃಷ್ಟಿಯಾಗಿದೆ. 

ದಿಲ್ಲಿ ವಿವಿ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಲಾಗಿದ್ದು ಈ ಇವಿಎಂ ಅನ್ನು ಚುನಾವಣಾ ಆಯೋಗದಿಂದ ನೀಡಲಾಗಿಲ್ಲ. ಇದು ಖಾಸಗಿಯಾಗಿ ಪೂರೈಯಾದುದಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. 

ಚುನಾವಣೆಯಲ್ಲಿ ಇವಿಎಂ ಬಳಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಮತ ಎಣಿಕೆಯನ್ನು ಕೆಲ ಸಂದರ್ಭ ನಿಲ್ಲಿಸಲಾಗಿತ್ತು. ಅದಾದ ಬಳಿಕ ಮತ್ತೆ ಎಣಿಕೆಯನ್ನು ಮುಂದುವರಿಸಲಾಯಿತು. 

ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿಯೂ ಕೂಡ ವರದಿ ಪ್ರಸಾರವಾಗಿದ್ದು, ಇದೀಗ ಚುನಾವಣಾ ಆಯೋಗವೇ ಸ್ಪಷ್ಟನೆ ನೀಡಿದೆ. ಇದಕ್ಕೆ ಚುನಾವಣಾ ಆಯೋಗವು ಇವಿಎಂ ಅನ್ನು ನೀಡಲಾಗಿಲ್ಲ. ಖಾಸಗಿಯಾಗಿ ಪೂರೈ ಮಾಡಿರುವುದಾಗಿದೆ ಎಂದು  ಹೇಳಿದೆ. 

ಆದ್ದರಿಂದ ಅಧಿಕ ಸ್ಥಾನಗಳಲ್ಲಿ ಗೆಲುವು ಪಡೆದಿದ್ದ ಎಬಿವಿಪಿ ವಾಮಮಾರ್ಗದ ಮೂಲಕ ಗೆಲುವು ಪಡೆಯಿತಾ ಎನ್ನುವ ಅನುಮಾನಗಳು ಮೂಡಿದೆ. 

click me!