ಸಂವಿಧಾನ ಬದಲಾಣೆ ಬಗ್ಗೆ ಮಾತನಾಡುವವರಿಗೆ ತಲೆ ಸರಿ ಇಲ್ಲ: ಅಣ್ಣಾ ಹಜಾರೆ

By Suvarna Web DeskFirst Published Jan 5, 2018, 2:51 PM IST
Highlights

ರೈತರಿಗೆ ಪಿಂಚಣಿ ಯೋಜನೆಯನ್ನು ಆರಂಭಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಬೆಳಗಾವಿ (ಜ.05): ರೈತರಿಗೆ ಪಿಂಚಣಿ ಯೋಜನೆಯನ್ನು ಆರಂಭಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇನ್ನು ಇದೇ ವೇಳೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದವರಿಗೆ ತಲೆ ಸರಿ ಇದ್ದಂತಿಲ್ಲ. ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು. ಈ ಕುರಿತು ಓರ್ವ ವ್ಯಕ್ತಿ ಮಾತನಾಡುವುದು ಸರಿಯಲ್ಲ ಎಂದು ಕೂಡ ಹೇಳಿದರು.

ಇತ್ತೀಚೆಗಷ್ಟೇ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನ ಬದಲಾವಣೆಯ ವಿಚಾರವಾಗಿ ಮಾತನಾಡಿದ್ದರು.  

ಇನ್ನು ಇದೇ ವೇಳೆ ನದಿ ನೀರನ್ನು ಕೂಡ ಪ್ರಾಣಿಗಳಿಗೆ ಮೊದಲು ಕುಡಿಯಲು ಬಳಕೆ ಮಾಡಬೇಕು. ನಂತರ ಕೃಷಿ ಕೈಗಾರಿಕೆಗಳಿಗೆ ಬಳಸಬೇಕು. ಆದರೆ ಪ್ರಸ್ತುತ ಸರ್ಕಾರ ಉದ್ಯಮಕ್ಕೆ  ಒತ್ತು ನೀಡಿ ಸಾವಿರಾರು ಕೋಟಿ ವಿನಾಯಿತಿ ನೀಡುತ್ತಿದೆ. ಆದರೆ ರೈತರ ಬಗ್ಗೆ ನಿರ್ಲಕ್ಷ್ಯ ತೋರಿದೆ ಎಂದರು.

ಏಷ್ಯಾದಲ್ಲಿ ಭ್ರಷ್ಟತೆಯಲ್ಲಿ ಭಾರತಕ್ಕೆ ಮೊದಲ ಸ್ಥಾನವಿದೆ. ನಂತರದ ಸ್ಥಾನದಲ್ಲಿ ಪಾಕಿಸ್ಥಾನ ಇದೆ ಎಂದು ಮೋದಿ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ವಾಗ್ದಾಳಿ ನಡೆಸಿದರು.

click me!