
ಬೆಂಗಳೂರು(ಅ.24): ದೇಶದಲ್ಲಿ ಜಿಎಸ್ಟಿ ಜಾರಿಯಾದ ಬಳಿಕ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಒಂದೇ ಸಮನೆ ಗ್ರಾಹಕರ ಸಂಖ್ಯೆ ಇಳಿಮುಖವಾಗಿದ್ದರಿಂದ ನಷ್ಟದ ಹಾದಿ ಹಿಡಿದಿವೆ. ಎಸಿ ಹೋಟೆಲ್'ಗಳಿಗೆ ಶೇ . 18 ರಷ್ಟು ಹಾಗೂ ನಾನ್ ಎಸಿ ಹೋಟೆಲ್'ಗಳಿಗೆ ಶೇ. 12 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಫೈವ್ಸ್ಟಾರ್, ತ್ರಿಸ್ಟಾರ್ ಹೋಟೆಲ್ ಗಳಿಗೆ ಶೇ. 18 ರಷ್ಟು ತೆರಿಗೆ ಯಾವ ಲೆಕ್ಕಕ್ಕೂ ಅಲ್ಲ. ಆದರೆ, ಮಧ್ಯಮ ವರ್ಗದ ಎಸಿ ಮೇಲಿನ ತೆರಿಗೆ ಹೊಡೆತ ಕೊಟ್ಟಿದೆ. \
ಎಸಿ ಇರೋ ಹೋಟೆಲ್'ಗಳಿಗೆ ಹೋಗೋದಕ್ಕೂ ಜನ ಹಿಂದೆ ಮುಂದೆ ನೋಡ್ತಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ 200 ಕ್ಕೂ ಹೆಚ್ಚು ಹೋಟೆಲ್ ಗಳು ತಮ್ಮ ವ್ಯಾಪಾರಕ್ಕೆ ಕಂಟಕವಾದ ಎಸಿಗಳನ್ನು ತೆರವು ಮಾಡಲು ಮುಂದಾಗಿವೆ.
ಹೋಟೆಲ್'ನ ಯಾವುದೋ ಒಂದು ರೂಮ್ನಲ್ಲಿ ಒಂದೇ ಒಂದು ಎಸಿ ಇದ್ದರು ಕೂಡ ಇಡೀ ಹೋಟೆಲ್ಗೆ ಶೇ. 18 ರಷ್ಟು ತೆರಿಗೆ ಅನ್ವಯವಾಗುತ್ತೆ. ಅಷ್ಟೇ ಅಲ್ಲ, ಎಸಿ ಹೋಟೆಲ್'ಗಳಿಂದ ಪಾರ್ಸಲ್ ತೆಗೆದುಕೊಂಡು ಹೋದ್ರು. ಶೇ. 18 ರಷ್ಟು ತೆರಿಗೆ ಪಾವತಿಸಲೇ ಬೇಕು.. ಇದು ಹೋಟೆಲ್ ಮಾಲೀಕರಿಗೆ ಭಾರೀ ಹೊಡೆತ ನೀಡಿದೆ.
ಒಟ್ಟಿನಲ್ಲಿ ಜಿಎಸ್'ಟಿಯಿಂದ ಮಧ್ಯಮ ವರ್ಗದ ಎಸಿ ಹೋಟೆಲ್'ಗಳಿಗೆ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಇದರಿಂದ ದಿಕ್ಕು ತೋಚದ ಹೋಟೆಲ್ ಮಾಲೀಕರು ಈಗ ಎಸಿಯನ್ನೇ ತೆರವು ಮಾಡೋ ಪರ್ಯಾಯ ಮಾರ್ಗದ ಮೊರೆ ಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.