ಪ್ರಯಾಣಿಕರ ಸುಲಿಗೆ: 13,500 ಆಟೋ ಚಾಲಕರಿಗೆ ದಂಡ

By Suvarna Web DeskFirst Published Jan 5, 2018, 7:47 AM IST
Highlights

ಗುರುವಾರ ಬೆಳಗ್ಗೆ 6 ಗಂಟೆಯಿಂದ ಪೂರ್ವ ವಿಭಾಗದಲ್ಲಿ ಪ್ರೊಬೆಷನರಿ ಸಬ್‌'ಇನ್ಸ್'ಪೆಕ್ಟರ್‌'ಗಳು ಮಾರುವೇಷದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.

ಬೆಂಗಳೂರು(ಜ.05): ಚಾಲನೆ ಪರವಾನಗಿ ಇಲ್ಲದಿರುವುದು, ಸಂಚಾರ ನಿಯಮ ಉಲ್ಲಂಘನೆ, ನಿಗದಿಪಡಿಸಿದ್ದಕ್ಕಿಂತ ಅಧಿಕ ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರ ವಿರುದ್ಧ ನಗರದ ಪೂರ್ವ ವಿಭಾಗದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 13,500 ಚಾಲಕರಿಗೆ ದಂಡ ಹಾಕಿದ್ದಾರೆ.

ಗುರುವಾರ ಬೆಳಗ್ಗೆ 6 ಗಂಟೆಯಿಂದ ಪೂರ್ವ ವಿಭಾಗದಲ್ಲಿ ಪ್ರೊಬೆಷನರಿ ಸಬ್‌'ಇನ್ಸ್'ಪೆಕ್ಟರ್‌'ಗಳು ಮಾರುವೇಷದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. ರಾತ್ರಿ 8 ಗಂಟೆ ತನಕ ಕಬ್ಬನ್‌'ಪಾರ್ಕ್, ವಿಲ್ಸನ್'ಗಾರ್ಡನ್, ಹಲಸೂರು, ಜೆ.ಬಿ. ನಗರ, ಕೆ.ಆರ್.ಪುರ, ಪದ್ಮನಾಭನಗರ, ಬಾಣಸವಾಡಿ, ಶಿವಾಜಿನಗರ, ಕೆ.ಜೆ.ಹಳ್ಳಿ, ಆಡುಗೋಡಿ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಕೋ ಲೇಔಟ್, ಏರ್‌'ಪೋರ್ಟ್, ವೈಟ್‌'ಫೀಲ್ಡ್, ಹುಳಿಮಾವು, ಎಚ್‌'ಎಸ್'ಆರ್ ಲೇಔಟ್,ಹೈಗ್ರೌಂಡ್ಸ್, ಹಲಸೂರು ಗೇಟ್, ಸದಾಶಿವ ನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಕಾರ್ಯಾಚರಣೆ ವೇಳೆ ಅಧಿಕ ಬಾಡಿಗೆ ವಸೂಲಿ- 306, ಅಧಿಕ ಬಾಡಿಗೆಗೆ ಬೇಡಿಕೆ-248, ಡಿಎಲ್ ರಹಿತ ಚಾಲನೆ-266, ಮೊಬೈಲ್ ಬಳಕೆ -265, ಸಮವಸ್ತ್ರ ರಹಿತ ಚಾಲನೆ-1287 ಸೇರಿದಂತೆ ಒಟ್ಟು 13,500 ಚಾಲಕರ ವಿರುದ್ಧ ದಂಡ ವಿಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಅಭಿಷೇಕ್ ಗೊಯೆಲ್ ತಿಳಿಸಿದರು

 

click me!