ಮುಂಗಾರಿಗೆ ಕಾದು ಕುಳಿತವರಿಗೆ ಶಾಕ್ ನೀಡಿದ ಹವಾಮಾನ ಇಲಾಖೆ

Published : Jun 05, 2019, 08:57 AM IST
ಮುಂಗಾರಿಗೆ ಕಾದು ಕುಳಿತವರಿಗೆ ಶಾಕ್ ನೀಡಿದ ಹವಾಮಾನ ಇಲಾಖೆ

ಸಾರಾಂಶ

ಮುಂಗಾರಿಗಾಗಿ ಕಾದು ಕುಳಿತವರಿಗೆ ಹವಾಮಾನ ಇಲಾಖೆ ಶಾಕ್ ನೀಡಿದೆ. ಈಗಾಗಲೇ ತಡವಾಗಿರುವ ಮುಂಗಾರು ಇನ್ನೂ ತಡವಾಗಿ ಕೇರಳಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ನವದೆಹಲಿ: ಮುಂಗಾರು ನಿರೀಕ್ಷೆಗಿಂತಲೂ ಎರಡು ದಿನ ವಿಳಂಬವಾಗಿ ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಅರಬ್ಬೀ ಸಮುದ್ರ ದಲ್ಲಿ ಬುಧವಾರದ ಬಳಿಕ ಮುಂಗಾರು ಆಗಮನಕ್ಕೆ ಉತ್ತಮವಾದ ವಾತಾವರಣ ಇರಲಿದ್ದು, ಮುಂದಿನ 96 ಗಂಟೆಗಳಲ್ಲಿ ಮುಂಗಾರು ಕೇರಳವನ್ನು ತಲುಪುವ ನಿರೀಕ್ಷೆ ಇದೆ. 

ಹೀಗಾಗಿ ಜೂ. 8 ರಂದು ಮುಂಗಾರು ಕೇರಳಕ್ಕೆ ಆಗಮಿಸುವ ಸಾಧ್ಯತೆ ಇದೆ. ಈ ಮುನ್ನ ಜೂ.6 ರಂದು ಮುಂಗಾರು ಕೇರಳಕ್ಕೆ ಆಗಮಿಸಲಿದೆ ಎಂದು ಅಂದಾಜಿಸ ಲಾಗಿತ್ತು. 

ಎರಡು ದಿನ ವಿಳಂಬವಾಗಿರುವ ಕಾರಣ ಮುಂಗಾರು ಜು. 10 ರ ವೇಳೆಗೆ ಕರ್ನಾಟಕವನ್ನು ಆವರಿಸಿಕೊಳ್ಳಲಿದ್ದು, ಕರ್ನಾಟಕದ ಉತ್ತರ ಒಳನಾಡಿನ ಭಾಗದಲ್ಲಿ ಮುಂದಿನ ಎರಡು ದಿನದಲ್ಲಿ ಗುಡುಗು, ಸಿಡಿಲಿನ ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ