
ಚಾಮರಾಜನಗರ[ಡಿ.18] ಸುಳ್ವಾಡಿ ಮಾರಮ್ಮ ದೇವರ ವಿಷ ಪ್ರಸಾದ ದುರಂತ ಪ್ರಕರಣದ ನೋವು ಮಾತ್ರ ಸದ್ಯಕ್ಕೆ ಮರೆಯಾಗುವುದೇ ಅಲ್ಲ. ನೊಂದ ಕುಟುಂಬಗಳಿಗೆ ಕಣ್ಣೀರಿನ ಕತೆ ಮರೆಯಲು ವರ್ಷಗಳೆ ಹಿಡಿದಾವು.
ದುರಂತಕ್ಕೆ ಕಾರಣವಾದ ಪ್ರಸಾದದಲ್ಲಿ ಬೆರೆತ ವಿಷವಾದರೂ ಯಾವುದು? ಪ್ರಸಾದದಲ್ಲಿ ಬೆರೆತಿದ್ದ ಮೊನೋಕ್ರೊಟೊಪಾಸ್ ವಿಷದ ಪ್ರಭಾವ ಎಂಥದ್ದು? ಪ್ರಸಾದದಲ್ಲಿ ಬೆರೆತಿದ್ದು ಆರ್ಗನೋಫಾಸ್‌ಪರಸ್ ವಿಷದ ಗುಂಪಿಗೆ ಸೇರಿದ ವಿಷ. ಇದನ್ನು ಸೇವಿಸಿದ ಕೆಲವೇ ನಿಮಿಷದಲ್ಲಿ ಜಠರದ ಮೂಲಕ ರಕ್ತಗತವಾಗುತ್ತೆ. ನರ ಹಾಗೂ ಸ್ನಾಯು ಸಂಧಿಸುವ ಜಾಗದಲ್ಲಿ ಸೇರಿಕೊಳ್ಳುವ ವಿಷ ಅಂಗಾಂಗವ್ಯೂಹವನ್ನೇ ಬಲಿ ಪಡೆಯುತ್ತದೆ.
ಉಸಿರಾಟದ ಸ್ನಾಯುಗಳು ವಿಫಲವಾಗಿ ಉಸಿರಾಟದ ತೊಂದರೆಯಿಂದ ರೋಗಿ ಸಾವನ್ನಪ್ಪುತ್ತಾನೆ. ದೇಹದ ಕೊಬ್ಬಿನಂಶಕ್ಕೆ ಸೇರಿಕೊಳ್ಳುವ ಮೋನೋಕ್ರೋಟೊಪಾಸ್ ಕಂತು ಕಂತುಗಳಲ್ಲಿ ಬಿಡುಗಡೆ ಆಗುತ್ತೆ. ಹಾಗಾಗಿ ಕನಿಷ್ಠ 20 ದಿನಗಳು ರೋಗಿಗಳ ಸ್ಥಿರತೆ ಬಗ್ಗೆ ನಿಖರವಾಗಿ ನಿಗಾ ಇಡಬೇಕು. ಈ ವಿಷ ಹೊಟ್ಟೆ ಸೇರಿದರೆ ನರದೌರ್ಬಲ್ಯ ಕಾಡುತ್ತದೆ. ಚೇತರಿಸಿಕೊಂಡ ನಂತರವೂ 8 ವರ್ಷ ಮನುಷ್ಯನನ್ನು ಈ ವಿಷದ ಪರಿಣಾಮ ಕಾಡಲಿದೆ.
15 ದಿನವಾದರೂ ತೀರ್ಪಿಗೆ ಬರುವುದೇ ಕಷ್ಟ. ಈ ವೇಳೆ ಹೃದಯವೂ ತೊಂದರೆಗೆ ಒಳಗಾಗಬಹುದು,ಕಿಡ್ನಿಯೂ ಫೇಲ್ ಆಗಬಹುದು. ಈ ಸಂದರ್ಭದಲ್ಲಿ ಅಂಗಾಗಗಳು ಶಾಶ್ವತವಾಗಿ ತೊಂದರೆಗೊಳಗಾಗಿದ್ದರೆ ಅದೇ ಸ್ಥಿತಿ ಮುಂದುವರೆಯುತ್ತದೆ. ಯಾವ ಪಾಪಿಗಳು ಇಂಥ ವಿಷವನ್ನು ಪ್ರಸಾದಕ್ಕೆ ಬೆರೆಸಿದರೋ.. ಅಮಾಯಕರು ಮಾತ್ರ ಪ್ರತಿದಿನ ಕಷ್ಟಪಡಲೇಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.