
ಡಲ್ಲಾಸ್(ಜು.6): ಕಾರು ಕಳ್ಳನೊಬ್ಬ ತನ್ನ ಮಕ್ಕಳ ಸಮೇತ ಕಾರನ್ನು ಕದ್ದೊಯ್ಯುತ್ತಿದ್ದುದನ್ನು ಕಂಡ ತಾಯಿಯೋರ್ವಳು ಕಾರು ಕಳ್ಳನಿಗೆ ಶೂಟ್ ಮಾಡಿದ ಘಟನೆ ಅಮೆರಿಕದ ಡಲ್ಲಾಸ್‌ನಲ್ಲಿ ನಡೆದಿದೆ.
ಇಲ್ಲಿನ ವೆಸ್ಟ್ ಕ್ಯಾಂಪ್ ವಿಸ್ಡಮ್ ರಸ್ತೆಯಲ್ಲಿ ತನ್ನ ಎಸ್‌ಯುವಿ ಕಾರಿಗೆ ಗ್ಯಾಸ್ ತುಂಬಿಸಲು ಬಂದಿದ್ದ ಮಿಶೆಲ್ ಎಂಬ ಮಹಿಳೆ, ತನ್ನಿಬ್ಬರು ಮಕ್ಕಳನ್ನು ಕಾರಿನಲ್ಲೇ ಬಿಟ್ಟು ಕೆಳಗಿಳಿದಿದ್ದಳು. ಈ ವೇಳೆ ಕಳ್ಳನೊಬ್ಬ ಏಕಾಏಕಿ ಕಾರಿನೊಳಗೆ ಹೊಕ್ಕು ಕಾರನ್ನು ಕದ್ದೊಯ್ಯಲು ಪ್ರಯತ್ನಿಸಿದ್ದಾನೆ.
ತನ್ನ ಮಕ್ಕಳು ಕಾರಿನಲ್ಲಿದ್ದಾರೆ ಎಂದು ಮಿಶೆಲ್ ಎಷ್ಟೇ ಹೇಳಿದರೂ ಕೇಳಿಸಿಕೊಳ್ಳದ ಕಳ್ಳ, ಮಕ್ಕಳ ಸಮೇತ ಕಾರನ್ನು ಕದ್ದೊಯ್ಯಲು ಪ್ರಯತ್ನಿಸಿದ್ದಾನೆ. ಬೇರೆ ದಾರಿ ಕಾಣದ ಮಿಶೆಲ್ ತನ್ನ ಬ್ಯಾಗ್‌ನಿಂದ ಗನ್ ಹೊರತೆಗೆದು ಕಳ್ಳನತ್ತ ಗುಂಡು ಹಾರಿಸಿದ್ದಾಳೆ.
ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಂಭೀರವಾಗಿ ಗಾಯಗೊಂಡಿದ್ದ ಕಳ್ಳನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಮಿಶೆಲ್‌ಳನ್ನು ವಿಚಾರಣೆಗೆ ಗುರಿಪಡಿಸಿದ ಪೊಲೀಸರು, ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ.
ಮಕ್ಕಳನ್ನು ರಕ್ಷಿಸಲು ನನಗೆ ಆತನ ಮೇಲೆ ಗುಂಡು ಹಾರಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಮಿಶೆಲ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಮಿಶೆಲ್ ತನ್ನ ಮಕ್ಕಳನ್ನು ರಕ್ಷಿಸಲು ಗುಂಡು ಹಾರಿಸಿದ್ದು, ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಅಲ್ಲದೇ ಮಿಶೆಲ್ ಮಕ್ಕಳಿಬ್ಬರೂ ಸುರಕ್ಷಿತವಾಗಿದ್ದು, ಎಸ್‌ಯುವಿ ಕಾರನ್ನು ಮಿಶೆಲ್ ಗೆ ಹಿಂದಿರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.