ಗೋರಕ್ಷಣೆಯೊಂದಿಗೆ ಹಿಂಸೆಯ ಸಮೀಕರಣ ಖಂಡನೀಯ: ಮೋಹನ್ ಭಾಗವತ್

By Suvarna Web DeskFirst Published Sep 30, 2017, 4:01 PM IST
Highlights

ಗೊರಕ್ಷಣೆಯೊಂದಿಗೆ ಹಿಂಸೆಯನ್ನು ಥಳಕು ಹಾಕುವುದನ್ನು ಖಂಡಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್,  ಗೋರಕ್ಷಣೆಯು ಧರ್ಮಾತೀತವಾದ ವಿಷಯವಾಗಿದೆ ಎಂದು ಹೇಳಿದ್ದಾರೆ. ನಾಗಪುರದಲ್ಲಿರುವ ಆರೆಸ್ಸೆಸ್  ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್, ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸುವುದು ಸ್ವೀಕಾರಾರ್ಹವಲ್ಲವೆಂದು ಹೇಳಿದ್ದಾರೆ.

ನಾಗಪುರ: ಗೊರಕ್ಷಣೆಯೊಂದಿಗೆ ಹಿಂಸೆಯನ್ನು ಥಳಕು ಹಾಕುವುದನ್ನು ಖಂಡಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್,  ಗೋರಕ್ಷಣೆಯು ಧರ್ಮಾತೀತವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.

ನಾಗಪುರದಲ್ಲಿರುವ ಆರೆಸ್ಸೆಸ್  ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್, ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸುವುದು ಸ್ವೀಕಾರಾರ್ಹವಲ್ಲವೆಂದು ಹೇಳಿದ್ದಾರೆ.

ಭಾರತದಲ್ಲಿ ಹಾಲಿಗಿಂತ ಹೆಚ್ಚಾಗಿ ಗೋಮೂತ್ರ ಹಾಗೂ ಗೊಬ್ಬರಕ್ಕಾಗಿ  ಹಸುಗಳು ಬಳಸಲ್ಪತ್ತದೆ.  ರೈತರು ಕೃಷಿಯಲ್ಲಿ ಪ್ರಗತಿ ಹೊಂದಬೇಕಾದರೆ ಗೋಸಾಕಣಿಕೆ ಮಾಡಲೇಬೇಕು ಎಂದು ಅವರು ಹೇಳಿದ್ದಾರೆ.

ಗೋಸಾಕಣಿಕೆಯು  ಧಾರ್ಮಿಕ ವಿಚಾರವಲ್ಲ. ಗೋಸಾಕಣಿಕೆಯಲ್ಲಿ ತೊಡಗಿರುವ ಎಷ್ಟೋ ಮುಸ್ಲಿಮರನ್ನು ನಾನು ಬಲ್ಲೆ, ಬಹಳ ಮುಸ್ಲಿಮರು ಗೋರಕ್ಷಣೆಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ, ಎಂದು ಅವರು ಹೇಳಿದ್ದಾರೆ.

ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ಸಲ್ಲದು, ಅದೇ ರೀತಿ ಗೋಕಳ್ಳರಿಂದ ಬಹಳಷ್ಟು ಮಂದಿಯ ಹತ್ಯೆಯಾಗಿದೆ.  ಗೋರಕ್ಷಣೆಯನ್ನು ಧರ್ಮಾತೀತವಾಗಿ ನೋಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

click me!