ನಲಪಾಡ್'ಗೆ ನಾಳೆ ನಿರ್ಣಾಯಕ ದಿನ

First Published May 29, 2018, 8:48 PM IST
Highlights

ತನಿಖೆ ಮುಕ್ತಾಯವಾಗಿದ್ದು, ಸಾಕ್ಷಿಗಳಿಗೆ ಯಾವುದೇ ಪ್ರಭಾವ ಬೀರುವ ಮಾತೇ ಇಲ್ಲ. ಹೀಗಾಗಿ ಜಾಮೀನು ನೀಡುವಂತೆ ನಲಪಾಡ್ ಪರ ವಕೀಲರು ಮನವಿ ಮಾಡಿದ್ದಾರೆ. ಆದರೆ, ಎಸ್ಪಿಪಿ ಶ್ಯಾಮಸುಂದರ್, ವಿಶೇಷ ಪ್ರಕರಣವಾಗಿದ್ದು, ಅಮಾನಿಯವಾಗಿ ಹಲ್ಲೆ ನಡೆಸಿದ್ದಾರೆ.

ಬೆಂಗಳೂರು(ಮೇ.29): ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಮೊಹಮದ್ ನಲಪಾಡ್ ಹ್ಯಾರಿಸ್ ಗೆ ನಾಳೆ ನಿರ್ಣಾಯಕ ದಿನ.
ಮಾರಾಣಾಂತಿಕ ಹಲ್ಲೆ ಆರೋಪದಲ್ಲಿ ಬರೋಬ್ಬರಿ 100 ದಿನ ಜೈಲು ವಾಸ ಅನುಭವಿಸಿ ಜೈಲಿನಿಂದ ಹೊರ ಬರುತ್ತಾನಾ ಎನ್ನುವುದು ನಾಳೆ ನಿರ್ಧಾರವಾಗಲಿದೆ. ಆರೋಪ ಪಟ್ಟಿ ಸಲ್ಲಿಕೆಯಾದ ನಂತರ ಎರಡನೇ ಸುತ್ತಿನಲ್ಲಿ ಜಾಮೀನು ಪಡೆಯುವ ಪ್ರಯತ್ನ ಮುಂದುವರೆದಿದೆ. ಜಾಮೀನು ಅರ್ಜಿ ಸಂಬಂಧ ಸೆಷನ್ಸ್ ಕೋರ್ಟ್ನಲ್ಲಿ ವಾದ ಪ್ರತಿವಾದ ಮುಕ್ತಾಯವಾಗಿದ್ದು ಇಂದು ಅಂತಿಮ ಆದೇಶ ಹೊರಬೀಳಲಿದೆ. 
ತನಿಖೆ ಮುಕ್ತಾಯವಾಗಿದ್ದು, ಸಾಕ್ಷಿಗಳಿಗೆ ಯಾವುದೇ ಪ್ರಭಾವ ಬೀರುವ ಮಾತೇ ಇಲ್ಲ. ಹೀಗಾಗಿ ಜಾಮೀನು ನೀಡುವಂತೆ ನಲಪಾಡ್ ಪರ ವಕೀಲರು ಮನವಿ ಮಾಡಿದ್ದಾರೆ. ಆದರೆ, ಎಸ್ಪಿಪಿ ಶ್ಯಾಮಸುಂದರ್, ವಿಶೇಷ ಪ್ರಕರಣವಾಗಿದ್ದು, ಅಮಾನಿಯವಾಗಿ ಹಲ್ಲೆ ನಡೆಸಿದ್ದಾರೆ. ಅಧಿಕಾರದ ಮದದಿಂದ ವಿಕೃತಿ ಮೆರೆದಿದ್ದು, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ. ವಾದ ಪ್ರತಿವಾದ ಆಲಿಸಿರುವ ಕೋರ್ಟ್ ನಾಳೆ ನೀಡಲಿರುವ ಆದೇಶ ಕುತೂಹಲ ಮೂಡಿಸಿದೆ.

click me!