ಅಮೆರಿಕದಲ್ಲಿ ಪ್ರತಿಷ್ಠಿತ ಕಂಪನಿಗಳ ಸಿಇಓಗಳ ಜೊತೆ ಮೋದಿ: ಇಂದು ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ

Published : Jun 26, 2017, 09:05 AM ISTUpdated : Apr 11, 2018, 01:02 PM IST
ಅಮೆರಿಕದಲ್ಲಿ ಪ್ರತಿಷ್ಠಿತ ಕಂಪನಿಗಳ ಸಿಇಓಗಳ ಜೊತೆ ಮೋದಿ: ಇಂದು ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ

ಸಾರಾಂಶ

2 ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಅಮೆರಿಕಾ ತಲುಪಿದ್ದಾರೆ. ನಿನ್ನೆ ವಾಷಿಂಗ್ಟನ್'​ನಲ್ಲಿ  ಪ್ರಮುಖ ಇಪ್ಪತ್ತು ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿದ್ದರು. ಇಂದು ವಿಶ್ವದ ದೊಡ್ಡಣ್ಣನನ್ನು ಮೋದಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇಡೀ ವಿಶ್ವದ ಕಣ್ಣು ಈಗ ಅಮೆರಿಕದತ್ತ ನೋಡುತ್ತಿದೆ.

ವಾಷಿಂಗ್ಟನ್(ಜೂ.26): 2 ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಅಮೆರಿಕಾ ತಲುಪಿದ್ದಾರೆ. ನಿನ್ನೆ ವಾಷಿಂಗ್ಟನ್'​ನಲ್ಲಿ  ಪ್ರಮುಖ ಇಪ್ಪತ್ತು ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿದ್ದರು. ಇಂದು ವಿಶ್ವದ ದೊಡ್ಡಣ್ಣನನ್ನು ಮೋದಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇಡೀ ವಿಶ್ವದ ಕಣ್ಣು ಈಗ ಅಮೆರಿಕದತ್ತ ನೋಡುತ್ತಿದೆ.

ಮೂರು ದಿನಗಳ ಅಮರಿಕಾ ಪ್ರವಾಸದಲ್ಲಿರುವ ಪ್ರಧಾನಿ  ನರೇಂದ್ರ ಮೋದಿಗೆ ನಿನ್ನೆ ಅದ್ದೂರಿ ಸ್ವಾಗತ ಸಿಕ್ಕಿತು. ವಾಷಿಂಗ್ಟನ್‌ಗೆ ಬಂದಿಳಿದ ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯ್ತು. ಡೊನಾಲ್ಡ್ ಟ್ರಂಪ್​ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅಮೆರಿಕಾಗೆ ಭೇಟಿ ನೀಡಿರೋದು ಇಡೀ ವಿಶ್ವದ ಗಮನ ಸೆಳೆದಿದೆ. ವಿಶ್ವದ ಬಲಿಷ್ಠ ನಾಯಕರಿಬ್ಬರ ಭೇಟಿಯನ್ನ ಇಡೀ ವಿಶ್ವವೇ  ಕುತೂಹಲದಿಂದ ನೋಡುತ್ತಿದೆ.  

ನಿನ್ನೆ  ವಾಷಿಂಗ್ಟನ್'​ನಲ್ಲಿ  ವಿಶ್ವದ ಉದ್ಯಮಿ ದಿಗ್ಗಜರಾದ ಮೈಕ್ರೋಸಾಫ್ಟ್​ ಸಂಸ್ಥೆಯ ಸಿಇಒ ಸತ್ಯ ನಡೆಲ್ಲಾ,ಗೂಗಲ್​ ಸಂಸ್ಥೆಯ ಸಿಇಒ ಸುಂದರ್​ ಪಿಚೈ,ವಾಲ್​ಮಾರ್ಟ್​ ಸಂಸ್ಥೆಯ ಸಿಇಒ ಮ್ಯಾಕ್​ ಮಿಲಾನ್​,ಆ್ಯಪಲ್​ ಕಂಪನಿಯ ಸಿಇಒ ಟಿಮ್​ ಕುಕ್​, ಸೇರಿದಂತೆ ಪ್ರತಿಷ್ಠಿತ  21 ಕಂಪನಿಗಳ ಸಿಇಒಗಳನ್ನು  ಮೋದಿ ಭೇಟಿಯಾಗಿ ಮಾತುಕತೆ ನಡೆಸಿದರು. ಭಾರತದಲ್ಲಿ ಬಂಡವಾಳ ಹೂಡುವಂತೆ ಆಹ್ವಾನ ನೀಡಿದರು.

ಇದೇ ವೇಳೆ ಮಾತನಾಡಿದ ಗೂಗಲ್​ ಸಂಸ್ಥೆಯ ಸಿಇಒ ಸುಂದರ್​ ಪಿಚ್ಚೈ ಜುಲೈ ಒಂದನ್ನು ಬಹಳ ಕಾತುರದಿಂದ ಎದುರು ನೋಡುತ್ತಿರುವುದಾಗಿ ಹೇಳಿದರು. ಇದಾದ ಬಳಿಕ  ಪ್ರಧಾನಿ ಮೋದಿ ಅಮೆರಿಕಾದ ವಾಷಿಂಗ್ಟನ್​ ಡಿಸಿಯ ಉಪನಗರವಾದ ವರ್ಜಿನಿಯದಲ್ಲಿ   ಅನಿವಾಸಿ ಭಾರತೀಯರನ್ನು  ಭೇಟಿ ಮಾಡಿದ್ರು. ಬಳಿಕ  ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅಮೆರಿಕದಲ್ಲಿ ಮಿನಿ ಭಾರತವನ್ನು ನೋಡಿದಷ್ಟೆ ಸಂತೋಷವಾಗಿದೆ ಅಂತಾ ಹೇಳಿದರು.

ಇನ್ನೂ ಇದೇ ಮೊದಲ ಬಾರಿಗೆ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿಗರಿಗೆ  ಔತಣಕೂಟ ಆಯೋಜಿಸಿದ್ದಾರೆ. ವೈಟ್‌‌ಹೌಸ್‌‌ನಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಬಳಿಕ  ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವ್ಯಪಾರ ವಹಿವಾಟು, ಭಯೋತ್ಪಾದನೆ ನಿಗ್ರಹ ಸೇರಿದಂತೆ  ವಿವಾದಿತ ಎಚ್1ಬಿ1 ವೀಸಾ ಬಗೆಯೂ ಚರ್ಚೆ ನಡೆಸುವ ಸಾಧ್ಯತೆಯಿದೆ. ಅಲ್ದೇ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಒಟ್ಟಿನಲ್ಲಿ ಇಡೀ ವಿಶ್ವವೇ ಉಭಯ ನಾಯಕರ ಸಮಾಗಮವನ್ನು ಎದುರು ನೋಡ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ