ಕೋವಿಂದ್ ಮತ ಬೇಟೆ ಶುರು

By Suvarna Web DeskFirst Published Jun 26, 2017, 12:55 AM IST
Highlights

ಕೇಂದ್ರ ಸಚಿವೆ ಉಮಾಭಾರತಿ, ಡಿಸಿಎಂ ಕೇಶವ ಪ್ರಸಾದ್ ಮೌರ್ಯ, ದಿನೇಶ್ ಶರ್ಮಾ, ಸ್ಪೀಕರ್ ಹೃದಯ್ ನಾರಾಯಣ ದೀಕ್ಷಿತ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು. ಕೋವಿಂದ್‌ರ ತವರು ನಗರ ಕಾನ್ಪುರ ಪಕ್ಕದ ಉನ್ನಾವೊ ಕ್ಷೇತ್ರದ ಸಂಸದ ಸಾಕ್ಷಿ ಮಹಾರಾಜ್ ಕೂಡ ಇದ್ದರು.

ಲಖನೌ(ಜೂ.26): ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ತಮ್ಮ ಚುನಾವಣಾ ಪ್ರಚಾರವನ್ನು ಭಾನುವಾರ ತವರು ರಾಜ್ಯ ಉತ್ತರಪ್ರದೇಶದಿಂದ ಆರಂಭಿಸಿದ್ದಾರೆ. ಲಖನೌನಲ್ಲಿ ಅವರು ಭಾನುವಾರ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಶಾಸಕರು, ಸಂಸದರನ್ನು ಭೇಟಿಯಾಗಿ ಮತ ಯಾಚಿಸಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಭೂಪೇಂದ್ರ ಯಾದವ್ ಜೊತೆಗೆ ಆಗಮಿಸಿದ ಕೋವಿಂದ್, ನೇರವಾಗಿ ಸಿಎಂ ಯೋಗಿ ಆದಿತ್ಯನಾಥರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಶಾಸಕರೊಂದಿಗೆ ಮಾತುಕತೆ ನಡೆಸಿದರು.

ಕೇಂದ್ರ ಸಚಿವೆ ಉಮಾಭಾರತಿ, ಡಿಸಿಎಂ ಕೇಶವ ಪ್ರಸಾದ್ ಮೌರ್ಯ, ದಿನೇಶ್ ಶರ್ಮಾ, ಸ್ಪೀಕರ್ ಹೃದಯ್ ನಾರಾಯಣ ದೀಕ್ಷಿತ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು. ಕೋವಿಂದ್‌ರ ತವರು ನಗರ ಕಾನ್ಪುರ ಪಕ್ಕದ ಉನ್ನಾವೊ ಕ್ಷೇತ್ರದ ಸಂಸದ ಸಾಕ್ಷಿ ಮಹಾರಾಜ್ ಕೂಡ ಇದ್ದರು.

ಉತ್ತರಪ್ರದೇಶದ ಬಳಿಕ ದೇಶದ ಎಲ್ಲ ರಾಜ್ಯಗಳಿಗೆ ಕೋವಿಂದ್ ಭೇಟಿ ನೀಡಲಿದ್ದು, ಅವರೊಂದಿಗೆ ಇಬ್ಬರು ಸಂಸದರು ಪ್ರವಾಸದುದ್ದಕ್ಕೂ ಸದಾ ಇರಲಿದ್ದಾರೆ.

click me!