
ಚಂದ್ರಾಪುರ (ಮಹಾರಾಷ್ಟ್ರ): ‘ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ವರಿಷ್ಠ ನೇತಾರ ಎಲ್.ಕೆ. ಅಡ್ವಾಣಿ ಅವರನ್ನು ಚಪ್ಪಲಿಯಿಂದ ಹೊಡೆದು ವೇದಿಕೆಯಿಂದ ಹೊರದಬ್ಬಿದರು’ (ಜೂತಾ ಮಾರ್‌ಕೇ ಸ್ಟೇಜ್ ಸೇ ಉತಾರಾ) ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿವಾದಿತ ಹೇಳಿಕೆ ನೀಡಿದ್ದಾರೆ.
ದಿಗ್ಗಿ ವಿರುದ್ಧ ಅಡ್ವಾಣಿ ಪುತ್ರಿ ಕಣಕ್ಕೆ...?
ಶುಕ್ರವಾರ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ‘ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಹಿಂದು ಧರ್ಮದಲ್ಲಿ ಗುರುವೇ ಶ್ರೇಷ್ಠ. ಅದು ಗುರುಶಿಷ್ಯ ಪರಂಪರೆ ಬಗ್ಗೆ ಸಾರಿ ಹೇಳುತ್ತದೆ. ಮೋದಿ ಅವರ ಗುರು ಯಾರು? ಅಡ್ವಾಣಿ. ಮೋದಿ ಅವರು ಚಪ್ಪಲಿಯಿಂದ ಹೊಡೆದು ಅಡ್ವಾಣಿ ಅವರನ್ನು ವೇದಿಕೆಯಿಂದ ಹೊರದಬ್ಬಿದರು’ ಎಂದು ಕಿಡಿಕಾರಿದರು.
ಮೋದಿಗೆ ರೈಫಲ್ ಹಿಡಿಯೋಕೆ ಬರುತ್ತಾ?
ಸರ್ಜಿಕಲ್ ದಾಳಿ ಮಾಡಿಸಿದ್ದು ತಾವೇ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಗೆ ಗನ್ ಹಿಡಿಯೋಕಾದ್ರೂ ಬರುತ್ತಾ?’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಬುಧವಾರ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ರಾಹುಲ್, ‘ವಾಯುಪಡೆ ಮಾಡಿದ ಸರ್ಜಿಕಲ್ ದಾಳಿಯನ್ನು ತಾವೇ ಮಾಡಿದ್ದೆಂದು ಮೋದಿ ಹೇಳುತ್ತಾರೆ. ರೈಫಲ್ ಹಿಡಿಯೋದು ಹೇಗೆಂದು ತೋರಿಸ್ತೀರಾ ಮೋದೀಜಿ? ಸಿಆರ್‌ಪಿಎಫ್ ಯೋಧರ ಥರಾ 5 ನಿಮಿಷ ಹಿಡ್ಕೊಳ್ಳಿ ಸಾಕು ಅಥವಾ ಜಮ್ಮು-ಕಾಶ್ಮೀರಕ್ಕೆ ಒಬ್ಬರೇ ಬಸ್ಸಲ್ಲಿ ಹೋಗಿ. ವಾಯುದಾಳಿ ಹೇಗೆ ಮಾಡೋದು ಹೇಳಿ. ನರೇಂದ್ರ ಮೋದಿ ಅವರೇ ವಾಯುದಾಳಿ ಮಾಡಿದ್ರಾ? ಅದೂ ದಿಲ್ಲಿಯ ರೇಸ್‌ಕೋರ್ಸ್ ರಸ್ತೆಯ ತಮ್ಮ ಮನೇಲಿ ಕುಳಿತು’ ಎಂದು ಕುಹಕವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.