ನೋಟ್ ಬ್ಯಾನ್ ಬಳಿಕ ಮೋದಿಯ ಮುಂದಿನ ಬಾಣ ಬೃಹತ್ ಇ-ಮಾರ್ಕೆಟ್ ನಿರ್ಮಾಣ?

Published : Dec 01, 2016, 10:22 AM ISTUpdated : Apr 11, 2018, 12:48 PM IST
ನೋಟ್ ಬ್ಯಾನ್ ಬಳಿಕ ಮೋದಿಯ ಮುಂದಿನ ಬಾಣ ಬೃಹತ್ ಇ-ಮಾರ್ಕೆಟ್ ನಿರ್ಮಾಣ?

ಸಾರಾಂಶ

ಪೇಪರ್ ಕ್ಲಿಪ್'ಗಳಿಂದ ಹಿಡಿದು ಗೇರ್, ಟರ್ಬೈನ್ ಮೊದಲಾದ ವಸ್ತುಗಳವರೆಗೂ ಎಲ್ಲವನ್ನೂ ಆನ್'ಲೈನ್'ನಲ್ಲೇ ಖರೀದಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಪಾರದರ್ಶಕ ವ್ಯವಸ್ಥೆ ನಿರ್ಮಿಸಲು ಸಹಾಯಕವಾಗುತ್ತದೆ ಎಂದು ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಅಧಿಕಾರಿ ರೀಟಾ ತಿಯೋಟಿಯಾ ಅಭಿಪ್ರಾಯಪಡುತ್ತಾರೆ.

ನವದೆಹಲಿ(ಡಿ. 01): ನೋಟ್ ನಿಷೇಧದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲು ಸಜ್ಜಾಗಿದ್ದಾರೆ. ಕೇಂದ್ರ ಸರಕಾರದ ಮೂಲಗಳ ಪ್ರಕಾರ ಸರಕಾರದ ವಿವಿಧ ಇಲಾಖೆಗಳ ಖರೀದಿ ವ್ಯವಹಾರವೆಲ್ಲವನ್ನೂ ಆನ್'ಲೈನ್ ಮಾಡಲು ಮೋದಿ ನಿರ್ಧರಿಸಿದ್ದಾರೆ. ಇದರೊಂದಿಗೆ ದೇಶದ ಜಿಡಿಪಿಯ ಶೇ.20ರಷ್ಟು ಆರ್ಥಿಕತೆಯು ಕ್ಯಾಷ್'ಲೆಸ್ ಆಗಲಿದೆ. ಹಲವು ತಜ್ಞರ ಪ್ರಕಾರ ಇದು ವಿಶ್ವದ ಅತ್ಯುತ್ತಮ ಖರೀದಿ ವ್ಯವಸ್ಥೆಯಾಗಲಿದೆಯಂತೆ. ಸದ್ಯಕ್ಕೆ ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆಗಳನ್ನು ಹೊರತುಪಡಿಸಿ ಬಹುತೇಕ ಇಲಾಖೆಗಳು ಈ ಇ-ಮಾರುಕಟ್ಟೆಯ ಭಾಗವಾಗಿವೆ. ಮುಂದಿನ ದಿನಗಳಲ್ಲಿ ಈ ಎರಡೂ ಬೃಹತ್ ಇಲಾಖೆಗಳನ್ನು ಆನ್'ಲೈನ್ ವ್ಯವಸ್ಥೆಯಡಿ ತರುವ ಪ್ರಯತ್ನವಾಗಲಿದೆ.

ಈಗಾಗಲೇ ಬೃಹತ್ ಇ-ಮಾರುಕಟ್ಟೆಯ ಜಾಲತಾಣ ನಿರ್ಮಾಣವಾಗಿದ್ದು, ವಿವಿಧ ಇಲಾಖೆಗಳ ಸಿಬ್ಬಂದಿಗೆ ತರಬೇತಿಯನ್ನೂ ನೀಡಲು ಆರಂಭಿಸಲಾಗಿದೆ. ಈ ವೆಬ್'ತಾಣ ಸದ್ಯ ನೋಡಲು ಅಮೇಜಾನ್, ಫ್ಲಿಪ್'ಕಾರ್ಟ್ ಮೊದಲಾದ ಇ-ಕಾಮರ್ಸ್ ವೆಬ್'ಸೈಟ್'ಗಳಂತೆ ಇದೆ. ಪೇಪರ್ ಕ್ಲಿಪ್'ಗಳಿಂದ ಹಿಡಿದು ಗೇರ್, ಟರ್ಬೈನ್ ಮೊದಲಾದ ವಸ್ತುಗಳವರೆಗೂ ಎಲ್ಲವನ್ನೂ ಆನ್'ಲೈನ್'ನಲ್ಲೇ ಖರೀದಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಪಾರದರ್ಶಕ ವ್ಯವಸ್ಥೆ ನಿರ್ಮಿಸಲು ಸಹಾಯಕವಾಗುತ್ತದೆ ಎಂದು ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಅಧಿಕಾರಿ ರೀಟಾ ತಿಯೋಟಿಯಾ ಅಭಿಪ್ರಾಯಪಡುತ್ತಾರೆ.

ಈಗಿರುವ ವ್ಯವಸ್ಥೆ ಹೇಗೆ?
ವಿವಿಧ ಸರಕಾರೀ ಇಲಾಖೆಗಳು ಹಾಗೂ ಕಾರ್ಖಾನೆಗಳಲ್ಲಿ ಖರೀದಿಗಾಗಿ ಟೆಂಡರ್ ವ್ಯವಸ್ಥೆ ಇದೆ. ಇಲ್ಲಿ ಸ್ಥಳೀಯ ಸರಬರಾಜುದಾರರ ಪಾತ್ರ ಬಹಳ ಮಹತ್ವ ವಹಿಸುತ್ತದೆ. ಪ್ರಭಾವ ಬೀರುವುದು ಸೇರಿದಂತೆ ಭ್ರಷ್ಟಾಚಾರಕ್ಕೆ ಆಸ್ಪದವಾಗುವಂತಹ ಸಂಗತಿಗಳೇ ಹೆಚ್ಚು. ಆದರೆ, ಎಲ್ಲವನ್ನೂ ಆನ್'ಲೈನ್ ಮಾಡಿದರೆ ಇಡೀ ವ್ಯವಸ್ಥೆ ಪಾರದರ್ಶಕವಾಗುತ್ತದೆ. ವೆಂಡರ್'ಗಳಿಗೆ 10 ದಿನಗಳಲ್ಲಿ ಪೇಮೆಂಟ್ ಕೊಡುವ ಯೋಜನೆಯೂ ಇದೆ. ಇದರಿಂದ ಮಾರಾಟಗಾರರು ಹಣದ ಪಾವತಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಭ್ರಷ್ಟಾಚಾರಕ್ಕೆ ಬಹುತೇಕ ಕಡಿವಾಣ ಬಿದ್ದಂತಾಗುತ್ತದೆ ಎಂಬುದು ಇ-ಮಾರುಕಟ್ಟೆ ಸಮರ್ಥಕರ ಅಭಿಪ್ರಾಯವಾಗಿದೆ.

ಅಪಾಯವೂ ಇದೆ:
ಉದ್ದೇಶಿತ ಇ-ಮಾರುಕಟ್ಟೆಯಲ್ಲಿ ಬಿಡ್ ಸಲ್ಲಿಸಲು ವೈಯಕ್ತಿಕ ಮೊಬೈಲ್ ನಂಬರು ಮತ್ತು ಆಧಾರ್ ಬಯೋಮೆಟ್ರಿಕ್ ಕಾರ್ಡ್'ನ ವಿವರಗಳನ್ನು ನೀಡಬೇಕಾದ ಅಗತ್ಯ ಇದೆ. ಇಲಾಖೆಯ ಖರೀದಿ ಮಾಡಲು ವೈಯಕ್ತಿಕ ಆಧಾರ ಕಾರ್ಡ್'ನ ವಿವರ ನೀಡಬೇಕಾಗುತ್ತದೆ. ಇದರಿಂದಾಗಿ ತಮ್ಮ ವೈಯಕ್ತಿಕ ವಿವರಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದೇ ಇರುತ್ತದೆ. ಸರಕಾರ ಈ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ದಿಲ್ಲಿಯ ಸರಕಾರ ಆಸ್ಪತ್ರೆಯ ಉದ್ಯೋಗಿ ರಾಜೇಶ್ ಕೊಹ್ಲಿ ಹೇಳುತ್ತಾರೆ.

ಅಷ್ಟೇ ಅಲ್ಲ, ಇ-ಮಾರುಕಟ್ಟೆ ನಿರ್ಮಾಣದಿಂದ ಬೃಹತ್ ಪ್ರಮಾಣದ ಡೇಟಾ ಸೃಷ್ಟಿಯಾಗುತ್ತದೆ. ಈ ಡೇಟಾಗಳ ಸುರಕ್ಷತೆಗೆ ಸರಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಮುಖ್ಯ ಎಂದು ಕೆಲ ಉದ್ಯಮಿಗಳು ಅಭಿಪ್ರಾಯಪಡುತ್ತಾರೆ.

(ಮಾಹಿತಿ: ಅರ್ಚನಾ ಚೌಧರಿ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು