
ಬೆಂಗಳೂರು(ಎ.05): ಬೆಂಗಳೂರು ಮೂಲದ ಸಾಮಾನ್ಯ ವ್ಯಕ್ತಿಯನ್ನು ಪ್ರಧಾನಿ ಮೋದಿ ಟ್ವಿಟರ್'ನಲ್ಲಿ ಫಾಲೋ ಮಾಡುತ್ತಿದ್ದಾರೆ. ತನ್ನ ಟ್ವೀಟ್ ಪೋಸ್ಟ್'ನಿಂದಾಗಿ ಆಕಾಶ್ ಜೈನ್ ಮೋದಿಯನ್ನು ಇಂಪ್ರೆಸ್ ಮಾಡಿದ್ದಾನೆ.
ವಿಶ್ವದಾದ್ಯಂತ್ಯ ಮೋದಿಯನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದರೆ, ಮೋದಿ ಫಾಲೋ ಮಾಡುತ್ತಿರುವುದು 1,700 ಜನರನ್ನು ಮಾತ್ರ. ಅದರಲ್ಲಿ ಬೆಂಗಳೂರು ಮೂಲದ ಆಕಾಶ್ ಜೈನ್ ಕೂಡ ಒಬ್ಬರು. ಬೆಂಗಳೂರು ಮೂಲದ ಈ ಯುವ ಉದ್ಯಮಿ ತನ್ನ ಸಹೋದರಿಯ ಮದುವೆಗೆ ಸ್ವಚ್ಛ ಭಾರತದ ಲೋಗೋ ಹಾಕಿಸಿ ಪ್ರಿಂಟ್ ಮಾಡಿ ಅದನ್ನು ಮೋದಿಗೆ ಟ್ಯಾಗ್ ಮಾಡಿ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇವರ ಈ ಪ್ರಯತ್ನವನ್ನು ಮೆಚ್ಚಿರುವ ಪ್ರಧಾನಿ ಮೋದಿ ಆತನ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿ, ಆತನನ್ನು ಫಾಲೋ ಮಾಡಲಾರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.