ಫೇಸ್ಬುಕ್'ನಲ್ಲಿ ಮೋದಿ ವಿಶ್ವದ ನಂ.1 ರಾಜಕೀಯ ನೇತಾರ

Published : May 28, 2017, 11:55 AM ISTUpdated : Apr 11, 2018, 12:46 PM IST
ಫೇಸ್ಬುಕ್'ನಲ್ಲಿ ಮೋದಿ ವಿಶ್ವದ ನಂ.1 ರಾಜಕೀಯ ನೇತಾರ

ಸಾರಾಂಶ

2014ರ ಸಾರ್ವತ್ರಿಕ ಚುನಾವಣೆ ಫಲಿತಾಂಶ ದಿನ ಮೋದಿಗೆ 1.4 ಕೋಟಿ ಫಾಲೋವರ್ಸ್ ಇದ್ದರು. ಈಗ ಇದು 4.19 ಕೋಟಿಗೆ ಏರಿಕೆಯಾಗಿದೆ. ನೋಟು ನಿಷೇಧ ಮತ್ತಿತರ ಯೋಜನೆ ಜಾರಿಗೊಳಿಸಿದಾಗಲೂ ಮೋದಿ ಫೇಸ್'​ಬುಕ್'​ಗೆ 40 ಲಕ್ಷ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು: ಕೇಂದ್ರದಲ್ಲಿ ಎನ್​'ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಫೇಸ್'​ಬುಕ್'​ನಲ್ಲಿ 4.19 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಜಾಗತಿಕವಾಗಿ ಹೆಚ್ಚು ಫಾಲೋವರ್ಸ್ ಹೊಂದಿದ ಅಗ್ರ ನಾಯಕ ಎನಿಸಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿ ಭಾರತದ ಪ್ರಧಾನಿ ಕಾರ್ಯಾಲಯ ಇದೆ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ವಚ್ಛ ಭಾರತ ಆಂದೋಲನದ ಫೇಸ್'​ಬುಕ್ ಪೇಜ್'​ಗಳಿಗೂ ಹತ್ತಾರು ಲಕ್ಷ ಫಾಲೋವರ್ಸ್ ಇದ್ದಾರೆ.

2014ರ ಸಾರ್ವತ್ರಿಕ ಚುನಾವಣೆ ಫಲಿತಾಂಶ ದಿನ ಮೋದಿಗೆ 1.4 ಕೋಟಿ ಫಾಲೋವರ್ಸ್ ಇದ್ದರು. ಈಗ ಇದು 4.19 ಕೋಟಿಗೆ ಏರಿಕೆಯಾಗಿದೆ. ನೋಟು ನಿಷೇಧ ಮತ್ತಿತರ ಯೋಜನೆ ಜಾರಿಗೊಳಿಸಿದಾಗಲೂ ಮೋದಿ ಫೇಸ್'​ಬುಕ್'​ಗೆ 40 ಲಕ್ಷ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ. ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ವಿಕೆ ಸಿಂಗ್, ಪಿಯೂಷ್ ಗೋಯೆಲ್ ಮತ್ತು ಅರುಣ್ ಜೇಟ್ಲಿ ಫೇಸ್'​ಬುಕ್​'ಗೂ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ, ವಿದೇಶಾಂಗ ಇಲಾಖೆ ಹಾಗೂ ರೈಲ್ವೆ ಇಲಾಖೆಗಳ ಫೇಸ್'ಬುಕ್ ಖಾತೆಗಳು ಸಕ್ರಿಯವಾಗಿವೆ.

ಇದೇ ವೇಳೆ, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ 9 ಕೋಟಿಗೂ ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ. ಜಸ್ಟಿನ್ ಬೀಬರ್ ಮೊದಲಾದ ಪಾಕ್, ರಾಕ್ ಸ್ಟಾರ್'ಗಳು ಫೇಸ್ಬುಕ್'ನಲ್ಲಿ ದೊಡ್ಡ ಫಾಲೋಯಿಂಗ್ ಹೊಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ