
ನವದೆಹಲಿ [ಮೇ.14]: 2014 ಮೇನಲ್ಲಿ ಅಧಿಕಾರಕ್ಕೆ ಬಂದ ಬಳಿಕ ನರೇಂದ್ರ ಮೋದಿ ಸರ್ಕಾರವು ಪ್ರಚಾರಕ್ಕೆ 4343 ಕೋಟಿ ರೂ.ಗಳನ್ನು ವ್ಯಯಿಸಿದೆ ಎಂದು ಆರ್‌ಟಿಐ ಅರ್ಜಿಯಿಂದ ಬಹಿರಂಗವಾಗಿದೆ.
ಅನಿಲ್ ಗಲಗಲಿ ಎಂಬ ಮಾಹಿತಿ ಹಕ್ಕು ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನ ಸಂಸ್ಥೆಯಾದ ’ಔಟ್‌ರೀಚ್ ಕಮ್ಯೂನಿಕೇಶನ್’ ಈ ಮಾಹಿತಿಯನ್ನು ಒದಗಿಸಿದೆ.
ಈ ಮೊತ್ತವು ಮುದ್ರಣ, ವಿದ್ಯುನ್ಮಾನ ಹಾಗೂ ಹೊರಾಂಗಣ ಜಾಹೀರಾತುಗಳಿಗೆ ವ್ಯಯಿಸಲಾದ ಖರ್ಚನ್ನು ಒಳಗೊಂಡಿದೆ ಎಂದು ಹೇಳಲಾಗಿದೆ,
ಲಭ್ಯವಾಗಿರುವ ವಿವರಗಳ ಪ್ರಕಾರ, 1 ಜೂನ್ 2014 ರಿಂದ 7 ಡಿಸೆಂಬರ್ 2017 ಅವಧಿಯಲ್ಲಿ ಮುದ್ರಣ ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ₹1732.15 ಕೋಟಿ, 1 ಜೂನ್ 2014ರಿಂದ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ₹2,079.87 ಕೋಟಿ ಹಣವನ್ನು ಕೇಂದ್ರ ಸರ್ಕಾರ ವ್ಯಯಿಸಿದೆ. ಹೊರಾಂಗಣ ಜಾಹೀರಾತುಗಳಿಗೆ ಜೂನ್ 2014 ರಿಂದ ಜನವರಿ 2018 ವರೆಗೆ ₹531.24ಕೋಟಿ ಹಣವನ್ನು ಖರ್ಚು ಮಾಡಲಾಗಿದೆ.
ಮುದ್ರಣ ಮಾಧ್ಯಮದಲ್ಲಿ ಪತ್ರಿಕೆಗಳು, ನಿಯತಕಾಲಿಕೆಗಳು, ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಟಿವಿ, ಇಂಟರ್ನೆಟ್, ರೇಡಿಯೋ, ಡಿಜಿಟಲ್ ಸಿನೆಮಾ, ಎಸ್ಎಂಎಸ್ ಒಳಗೊಂಡಿವೆ. ಪೋಸ್ಟರ್, ಬ್ಯಾನರ್ಸ್, ಡಿಜಿಟಲ್ ಪ್ಯಾನೆಲ್, ಹೋರ್ಡಿಂಗ್ಸ್, ರೈಲ್ವೇ ಟಿಕೆಟ್ ಮುಂತಾದವುಗಳು ಹೊರಾಂಗಣ ಮಾಧ್ಯಮದ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಔಟ್‌ರೀಚ್ ಸಂಸ್ಥೆಯು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.