ನೋಟ್ ಬ್ಯಾನ್'ನಿಂದ ದೇಶದಲ್ಲಿ ತರಹೇವಾರಿ ಹೇಳಿಕೆ: ಮೋದಿ ಕೊಟ್ಟರು ಪಾಸಿಟಿವ್ ಲಿಸ್ಟ್!

By Suvarna Web DeskFirst Published Nov 16, 2016, 3:56 PM IST
Highlights

ಪ್ರಧಾನಿ ಮೋದಿ ಮನಿ ಮಾಸ್ಟರ್ ಸ್ಟ್ರೋಕ್ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಕೆಲವರು ಇದು ಆರ್ಥಿಕ ಬಿಕ್ಕಟ್ಟು ಎಂದು ಹೇಳಿಕೆ ನೀಡಿದರೆ, ಮತ್ತೆ ಕೆಲವರು ಜನಸಾಮಾನ್ಯರನ್ನು ಪರದಾಡುವಂತೆ ಮಾಡಿದೆ ಎಂದೆಲ್ಲ ನಾನಾ ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಆದರೆ ದೇಶದಲ್ಲಿ ಜನ ಸಾಮಾನ್ಯ ಪರದಾಡುತ್ತಿದ್ದರು ಕೂಡ ಪ್ರಧಾನಿ ಮೋದಿ ಮತ್ತವರ ಮಂತ್ರಿ ಮಂಡಲದ ಸದಸ್ಯರು ಮಾತ್ರ ಯೋಜನೆ ಜಾರಿಯಿಂದ ದೇಶದಲ್ಲಿ ಜನತೆ ಖುಷಿಯಾಗಿದ್ದಾರೆ ಎಂಬ ಪ್ರಬಲ ನಂಬಿಕೆಯಲ್ಲಿದ್ದಾರೆ.

ನವದೆಹಲಿ(ಅ.17): ಪ್ರಧಾನಿ ಮೋದಿ ಮನಿ ಮಾಸ್ಟರ್ ಸ್ಟ್ರೋಕ್ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಕೆಲವರು ಇದು ಆರ್ಥಿಕ ಬಿಕ್ಕಟ್ಟು ಎಂದು ಹೇಳಿಕೆ ನೀಡಿದರೆ, ಮತ್ತೆ ಕೆಲವರು ಜನಸಾಮಾನ್ಯರನ್ನು ಪರದಾಡುವಂತೆ ಮಾಡಿದೆ ಎಂದೆಲ್ಲ ನಾನಾ ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಆದರೆ ದೇಶದಲ್ಲಿ ಜನ ಸಾಮಾನ್ಯ ಪರದಾಡುತ್ತಿದ್ದರು ಕೂಡ ಪ್ರಧಾನಿ ಮೋದಿ ಮತ್ತವರ ಮಂತ್ರಿ ಮಂಡಲದ ಸದಸ್ಯರು ಮಾತ್ರ ಯೋಜನೆ ಜಾರಿಯಿಂದ ದೇಶದಲ್ಲಿ ಜನತೆ ಖುಷಿಯಾಗಿದ್ದಾರೆ ಎಂಬ ಪ್ರಬಲ ನಂಬಿಕೆಯಲ್ಲಿದ್ದಾರೆ.

ಪ್ರಧಾನಿ ಕಾರ್ಯಾಲಯದಿಂದ ಲಾಭದ ಅಂಶಗಳ ಪಟ್ಟಿ ರವಾನೆ

ಪ್ರಧಾನಿ ಕಾರ್ಯಾಚಲಯ ಇದರಿಂದಾದ ಲಾಭದ ಅಂಶಗಳನ್ನು ಪಟ್ಟಿ ಮಾಡಿದ್ದು, ನಿನ್ನೆ ಸಂಜೆಯೇ ಇದನ್ನು ಬಿಜೆಪಿ ಸಂಸದರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಟಾಕಿಂಗ್ ಪಾಯಿಂಟ್'ಗಳನ್ನು ಇಟ್ಟುಕೊಂಡು ಮಾಧ್ಯಮಗಳಿಗೆ ಮಾತನಾಡುವಂತೆ ಹೇಳಲಾಗಿದೆ .

ಮೋದಿ ಕಂಡಂತೆ ಪಾಸಿಟಿವ್ ಅಂಶಗಳು

- ನೋಟು ರದ್ದತಿಯಿಂದ ನಕ್ಸಲ್ ,ಭೂಗತ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ

- ಜಮ್ಮು ಕಾಶ್ಮೀರದಲ್ಲಿ ಕಲ್ಲು ಹೊಡೆಯುವುದು ನಿಂತು ಹೋಗಿದೆ

- ಭ್ರಷ್ಟ ಜನ ಹಣವನ್ನು ಸುಡುತ್ತಿದ್ದಾರೆ

- ತೊಗರಿ ಬೆಲೆ ಕೆಜಿ  ೮೦ ರೂಪಾಯಿಗೆ ಇಳಿದಿದೆ

- ಕಿರಾಣಿ ಅಂಗಡಿಗಳಲ್ಲಿ ಆನ್​ಲೈನ್ ಮಷಿನ್​ಗಳನ್ನೂ ಹಾಕಲಾಗುತ್ತಿದೆ

- ಮುನ್ಸಿಪಾಲ್ಟಿಗಳು ರೆಕಾರ್ಡ್ ಲೆಕ್ಕದಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಸಂಗ್ರಹ ಮಾಡುತ್ತಿವೆ

- ಜನ ವಿದ್ಯುತ್ ಕಂಪನಿಗಳ ಬಾಕಿ ಹಣವನ್ನು ಮರುಪಾವತಿ ಮಾಡುತ್ತಿದ್ದಾರೆ

- ದೊಡ್ಡಮಟ್ಟದಲ್ಲಿ ಕಾಡುತ್ತಿದ್ದ ಹವಾಲಾ ಉದ್ಯಮ ನಿಂತು ಹೋಗಿದೆ

ಇದೇ ವಿಚಾರಗಳನ್ನು ಪ್ರಧಾನಿ ಇವತ್ತು ನೇರವಾಗಿ ಜನರ ಜೊತೆ ಸಂಸತ್ತಿನ ಭಾಷಣದ ಮೂಲಕ ಮಾತನಾಡುವ ಸಾಧ್ಯತೆಗಳಿವೆ. ಇನ್ನು ನೋಟಿನಿಂದ ಜನ ಹಣಕ್ಕಾಗಿ ಅಲೆದಾಡುತ್ತಿದ್ದಾರೆ, ಹಾಗಂತ ಪ್ರಧಾನಿ ಸುಮ್ಮನೆ ಕುಳಿತಿಲ್ಲ. ನಿತ್ಯವೂ ರಾತ್ರಿ ಹಣಕಾಸು ಇಲಾಖೆ ಮತ್ತು ರಿಸೆರ್ವ್ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ದೇಶದಲ್ಲೆಡೆಯ ಹಣದ ವಹಿವಾಟಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ಭಾನುವಾರದೊಳಗೆ ಎಟಿಎಂಗಳು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

click me!