
ಬೆಂಗಳೂರು (ಜ.22): ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಸುದ್ದಿವಾಹಿನಿಗೆ ಕೊಟ್ಟಿರುವ ಸಂದರ್ಶನ ಒಂದರಲ್ಲಿ ಕರ್ನಾಟಕದ ಸಂಸದರೊಬ್ಬರನ್ನ ಹೊಗಳಿದ್ದಾರೆ. ತಮ್ಮ ಸರ್ಕಾರದ ಫಸಲ್ ಭೀಮಾ ಯೋಜನೆಯನ್ನ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಕ್ಕಾಗಿ ಪ್ರಶಂಸಿದ್ದಾರೆ. ಹಾಗಾದರೆ ಯಾರು ಆ ಸಂಸದ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾಜ್ಯದ ಸಂಸದರೊಬ್ಬರ ಕೆಲಸವನ್ನ ಹೊಗಳಿದ್ದಾರೆ. ಬೀದರ್ ನಲ್ಲಿ ಕಳೆದ ಕೆಲ ತಿಂಗಳ ಹಿಂದೆ ಸುರಿದಿದ್ದ ಅಕಾಲಿಕ ಮಳೆಯಿಂದ ರೈತರು ಬೆಳೆದಿದ್ದ ಬೆಳೆ ಹಾನಿಗೀಡಾಗಿತ್ತು. ಆಗ ದಿಚ್ಚುತೋಚದಂತಾಗಿದ್ದ ರೈತರ ನೆರವಿಗೆ ಬಂದಿದ್ದು ಸಂಸದ ಭಗವಂತ್ ಖೂಬಾ. ಈ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಸಂಸದ ಖೂಬಾರ ಹೆಸರು ಹೇಳದೆ, ಬೀದರ್ ಸಂಸದ ಎಂದಿದ್ದರು. ಇದೀಗ, ಮೋದಿ ಉಲ್ಲೇಖಿಸಿದ್ದು ಸಂಸದ ಭಗವಂತ್ ಖೂಬಾ ಹೆಸರು ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ಪ್ರಶಂಸೆ ಹಿನ್ನೆಲೆ, ಸುವರ್ಣ ನ್ಯೂಸ್ ಗೆ ಬಿಜೆಪಿ ಸಂಸದ ಭಗವಂತ ಖೂಬ ಪ್ರತಿಕ್ರಿಯಿಸಿದ್ದು, ಸಂಸದೀಯ ಮಂಡಳಿ ಸಭೆ ಹಾಗೂ ಬೀದರ್'ಗೆ ಬಂದಾಗಲೂ ಮೋದಿ ಪ್ರಶಂಸಿದ್ದರು. ಫಸಲ್ ಭೀಮಾ ಯೋಜನೆಗೆ ಜಿಲ್ಲೆಯಲ್ಲಿ ಹೆಚ್ಚಿನ ರೈತರು ನೋಂದಣಿ ಮಾಡಿಸಿದ್ದು, 2016-17ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದ ಸುಮಾರು 1 ಲಕ್ಷ 21 ಸಾವಿರ ರೈತರಿಗೆ ಪರಿಹಾರ ನೀಡಲಾಗಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.