ಗಡಿನಾಡಿನಲ್ಲೊಬ್ಬ ಖಡಕ್ ಅಧಿಕಾರಿ; ತೆರಿಗೆ ಕಟ್ಟದ ಸರ್ಕಾರಿ ಕಚೇರಿಗಳಿಗೂ ಮುಟ್ಟಿಸಿದ್ದಾರೆ ಶಾಕ್!

By Suvarna Web DeskFirst Published Jan 22, 2018, 7:41 AM IST
Highlights

 ಒಬ್ಬ ಅಧಿಕಾರಿ ಮನಸ್ಸು ಮಾಡಿದ್ರೆ ಎಂಥವರ ಛಳಿ ಬಿಡಿಸಲು ಸಾಧ್ಯ. ಅನಧಿಕೃತ ಬಂಕ್'ಗಳನ್ನ ತೆರವುಗೊಳಿಸಿದ ಭೇಷ್ ಎನಿಸಿಕೊಂಡ ಬೀದರ್ ನಗರಸಭೆ ಆಯುಕ್ತ ಈಗ ಸರ್ಕಾರದ ಕಟ್ಟಡಗಳನ್ನೇ  ಜಪ್ತಿ ಮಾಡಿಕೊಳ್ಳಲು ಮುಂದಾಗಿದ್ದಾರೆ.  ಸಾಮಾನ್ಯರಿಂದ ಸಮಯಕ್ಕೆ ಸರಿಯಾಗಿ ತೆರಿಗೆ ಪಡೆಯುವ ಖಡಕ್ ಅಧಿಕಾರಿಯೊಬ್ಬ ಈಗ ಕೋಟಿಗಟ್ಟಲೆ ಟ್ಯಾಕ್ಸ್ ಉಳಿಸಿಕೊಂಡ ಸರ್ಕಾರಿ ಇಲಾಖೆಗಳನ್ನು ಬಿಡುತ್ತಿಲ್ಲ.

ಬೀದರ್ (ಜ.22): ಒಬ್ಬ ಅಧಿಕಾರಿ ಮನಸ್ಸು ಮಾಡಿದ್ರೆ ಎಂಥವರ ಛಳಿ ಬಿಡಿಸಲು ಸಾಧ್ಯ. ಅನಧಿಕೃತ ಬಂಕ್'ಗಳನ್ನ ತೆರವುಗೊಳಿಸಿದ ಭೇಷ್ ಎನಿಸಿಕೊಂಡ ಬೀದರ್ ನಗರಸಭೆ ಆಯುಕ್ತ ಈಗ ಸರ್ಕಾರದ ಕಟ್ಟಡಗಳನ್ನೇ  ಜಪ್ತಿ ಮಾಡಿಕೊಳ್ಳಲು ಮುಂದಾಗಿದ್ದಾರೆ.  ಸಾಮಾನ್ಯರಿಂದ ಸಮಯಕ್ಕೆ ಸರಿಯಾಗಿ ತೆರಿಗೆ ಪಡೆಯುವ ಖಡಕ್ ಅಧಿಕಾರಿಯೊಬ್ಬ ಈಗ ಕೋಟಿಗಟ್ಟಲೆ ಟ್ಯಾಕ್ಸ್ ಉಳಿಸಿಕೊಂಡ ಸರ್ಕಾರಿ ಇಲಾಖೆಗಳನ್ನು ಬಿಡುತ್ತಿಲ್ಲ.

ಗಡಿ ಜಿಲ್ಲೆ ಬೀದರ್'ನಲ್ಲೀಗ ಅಧಿಕಾರಿಯೊಬ್ಬರು ಅಂಥದ್ದೊಂದು ಹವಾ ನಿರ್ಮಾಣ ಮಾಡಿದ್ದಾರೆ. ನಗರಸಭೆಯ ಆಯುಕ್ತ ಮನೋಹರ್, ಬೀದರ್ ನಗರದಲ್ಲಿ ತಲೆಯೆತ್ತಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಶಾಕ್ ಕೊಟ್ಟಿದ್ರು. ಈಗ ದಶಕಗಳಿಂದ ತೆರಿಗೆ ಪಾವತಿಸದ ಸರ್ಕಾರಿ ಕಟ್ಟಗಳಿಗೂ ಖಡಕ್ ಸೂಚನೆ ಕಳಿಸಿದ್ದಾರೆ.  ಬೀದರ್ ವೈದ್ಯಕೀಯ ಸಂಸ್ಥೆ, ಪೊಲೀಸ್ ವಸತಿ ನಿಲಯ, ಅರಣ್ಯ, ಆರೋಗ್ಯ, ಜೈಲ್, ಪಿಡಬ್ಲೂಡಿ ಹೀಗೆ 13 ಕ್ಕೂ ಅಧಿಕ ಇಲಾಖೆಯ ಒಟ್ಟು 6.21 ಕೋಟಿ ಬಾಕಿ ತೆರಿಗೆಯನ್ನು 1 ತಿಂಗಳಲ್ಲಿ ಪಾವತಿಸದಿದ್ದರೆ ಕಟ್ಟಡಗಳನ್ನ ಮುಟ್ಟಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಆಯುಕ್ತ ಮನೋಹರ್ ಕಳೆದ 7 ವರ್ಷಗಳ ಅವಧಿಯಲ್ಲಿ 11 ಬಾರಿ ವರ್ಗಾವಣೆಗೊಂಡಿದ್ದು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸಿ ಸಾಕಷ್ಟು ಸುದ್ದಿ ಮಾಡಿದ್ದರು.  ಈಗ ಬೀದರ್ ಜಿಲ್ಲೆಯಲ್ಲಿ ತಮ್ಮ ಖದರ್ ತೋರಿಸುತ್ತಿದ್ದು ಜನರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ,.

ಪ್ರಮಾಣಿಕ ಮತ್ತು ಪಾರದರ್ಶಕ ಆಡಳಿತ ನೀಡುವ ಸಲುವಾಗಿ ಆಯುಕ್ತ ಮನೋಹರ್ ಅವರ ಕೆಲಸ ನಿಜಕ್ಕೂ ಮೆಚ್ಚಲೇಬೇಕು.

 

 

 

click me!