ಕಾಲ್ ಹಿಸ್ಟರಿ ಬಟಾಬಯಲು ಮಾಡಿತು ಮಾಡೆಲ್ ಅಸಲಿ ರಹಸ್ಯ

Published : Nov 02, 2018, 05:26 PM IST
ಕಾಲ್ ಹಿಸ್ಟರಿ ಬಟಾಬಯಲು ಮಾಡಿತು ಮಾಡೆಲ್ ಅಸಲಿ ರಹಸ್ಯ

ಸಾರಾಂಶ

ಫೋನ್ ಕಾಲ್ ಹಿಸ್ಟ್ರಿ ರೂಪದರ್ಶಿಯೊಬ್ಬಳ ರಹಸ್ಯ ಬಯಲು ಮಾಡಿದೆ. ಏನದು ರಹಸ್ಯ? ಮಾಡೆಲ್ ಮಾಡಿದ್ದಾದ್ರೂ ಏನು? ಇಲ್ಲಿದೆ ಫುಲ್ ಡಿಟೇಲ್ಸ್.

ನವದೆಹಲಿ, [ನ.02]:  ಕಳೆದ ಎರಡು ದಿನದ ಹಿಂದೆ ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದ 38 ವರ್ಷದ ಶಿಕ್ಷಕಿಯೊಬ್ಬಳ ಹತ್ಯೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ 26 ವರ್ಷದ ಮಾಡೆಲ್ ಏಂಜಲ್ ಗುಪ್ತಾ ಹಾಗೂ ಶಿಕ್ಷಕಿಯ ಪತಿ ಮಂಜೀತ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಶಿಕ್ಷಕಿ ಪತಿ ಮಂಜೀತ್ ಹಾಗೂ ಮಾಡೆಲ್ ಏಂಜೆಲ್ ಗುಪ್ತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದ್ರಿಂದ ಮಾಡೆಲ್ ಮೇಲಿನ ಆಸೆಗೆ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

ಶಿಕ್ಷಕಿ ಸುನಿತಾ  ಡೈರಿಯಲ್ಲಿ ಏಂಜಲ್ ಗುಪ್ತಾ ಬಗ್ಗೆ ಮಾಹಿತಿಯಿತ್ತು. ಈ ಬಗ್ಗೆ ಏಂಜಲ್ ಗುಪ್ತಾಳನ್ನು ವಶಕ್ಕೆ ಪಡೆದ ಪೊಲೀಸರು ಕಾಲ್ ಹಿಸ್ಟರಿ ಪರಿಶೀಲಿಸಿದ್ದಾರೆ.

ಈ ವೇಳೆ ಸುನಿತಾ ಪತಿ  ಮಂಜೀತ್ ಹಾಗೂ ಏಂಜಲ್ ಸಂಬಂಧ ಬಯಲಾಗಿದೆ. ಆರೋಪಿ ಮಂಜೀತ್ ಹಾಗೂ ಏಂಜಲ್ ನಡುವೆ ಮೊದಲಿಗೆ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಅಷ್ಟೇ ಅಲ್ಲದೇ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!