
ಗದಗ, [ಅ.30]: ಗದಗನಲ್ಲಿ ಪೊಲೀಸರು ಇಂದು [ಮಂಗಳವಾರ] ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಂಡುಪಾಳ್ಯ ಮಾದರಿಯಲ್ಲಿ ಕೊಲೆ ಮಾಡ್ತಿದ್ದ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ಮತ್ತು ಮೂಗ ಸೇರಿ ಒಟ್ಟು 8 ಜನರ ಗ್ಯಾಂಗ್ ನಲ್ಲಿ 6 ಜನರನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ಫೆ.4, 2017ರಲ್ಲಿ ವಿಮಲಾಬಾಯಿ ಹಾಗೂ ಮೇ.23.2018 ರಂದು ಸರೋಜಾ ಎಂಬ ವೃದ್ದೆಯರನ್ನ ಒಂದೇ ಮಾದರಿಯಲ್ಲಿ ಈ ಗ್ಯಾಂಗ್ ಕೊಲೆ ಮಾಡಿತ್ತು.
ಒಂಟಿ ವೃದ್ದೆ ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನಾಭರಣ ದೋಚುವುದೇ ಈ ಗ್ಯಾಂಗ್ ನ ಕಾಯಕವಾಗಿತ್ತು. ಧಾರವಾಡ ಜಿಲ್ಲೆ ಅಣ್ಣಿಗೇರಿ ಮೂಲದ ಶಂಕರಪ್ಪ, ಚಂದ್ರಪ್ಪ, ಉಮೇಶ, ಹುಬ್ಬಳ್ಳಿಯ ಸೆಟ್ಲಮೆಂಟ್ ಮೂಲದ ಮಾರುತಿ, ಮಣ್ಣಪ್ಪ, ಮೋಹನ್ ಬಂಧಿತ ಆರೋಪಿಗಳು.
ಬಸಮ್ಮ ಮತ್ತು ಸುರೇಶ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 2 ಕೊಲೆ ಜತೆಗೆ 10 ಕಳ್ಳತನ ಪ್ರಕರಣದಲ್ಲಿ ಈ ಗ್ಯಾಂಗ್ ಭಾಗಿಯಾಗಿದ್ದು, ಬಂಧಿತರಿಂದ 500 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ