ಲಂಕಾದಲ್ಲಿ ಮತ್ತೆ ಭುಗಿಲೆದ್ದ ಕೋಮು ಸಂಘರ್ಷ, ಇಡೀ ದೇಶದಲ್ಲಿ ಕರ್ಫ್ಯೂ

By Web DeskFirst Published May 14, 2019, 11:18 AM IST
Highlights

ಲಂಕಾದಲ್ಲಿ ಮತ್ತೆ ಭುಗಿಲೆದ್ದ ಕೋಮು ಸಂಘರ್ಷ, ಇಡೀ ದೇಶದಲ್ಲಿ ಕರ್ಫ್ಯೂ| ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ

ಕೊಲಂಬೋ[ಮೇ.14]: 250 ಜನರನ್ನು ಬಲಿ ಪಡೆದ ಉಗ್ರ ದಾಳಿಯ ಬಳಿಕ ಶ್ರೀಲಂಕಾ ಇನ್ನೇನು ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದೆ ಎನ್ನುವಷ್ಟರಲ್ಲೇ, ಮತ್ತೆ ದೇಶದ ಹಲವು ಭಾಗಗಳಲ್ಲಿ ಕೋಮುಸಂಘರ್ಷ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ 4 ನಗರಗಳಲ್ಲಿ ಕರ್ಫ್ಯೂ ಹೇರಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಷೇಧ ಹೇರಿದೆ.

ಕುಲಿಯಪಿಟಿಯಾ, ಹೆಟ್ಟಿಪೋಲಾ, ಬಿಂಗಿರಿಯಾ ಮತ್ತು ದುಮ್ಮಲಸೂರ್ಯ ನಗರಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಕ್ರೈಸ್ತರು ಮತ್ತು ಮುಸ್ಲಿಮರ ನಡುವೆ ಸಣ್ಣಪುಟ್ಟಪ್ರಮಾಣದಲ್ಲಿ ಕೋಮುಗಲಭೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕೂ ನಗರಗಳಲ್ಲಿ ಕಫä್ರ್ಯ ಹೇರಿ, ಅದನ್ನು ಸೋಮವಾರ ಬೆಳಗ್ಗೆ ಹಿಂಪಡೆಯಲಾಗಿತ್ತು. ಆದರೆ ಸೋಮವಾರ ಮಧ್ಯಾಹ್ನದ ವೇಳೆಗೆ ಮತ್ತೆ ಹೆಟ್ಟಿಪೋಲಾದಲ್ಲಿ ಗಲಭೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ನಾಲ್ಕೂ ನಗರಗಳಲ್ಲಿ ಕಫä್ರ್ಯ ಹೇರಲಾಗಿದೆ. ಅಲ್ಲದೆ ಈ ನಗರಗಳಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಷೇಧ ಹೇರಿದೆ.

ಈಸ್ಟರ್‌ ಭಾನುವಾರದಂದು ಸ್ಥಳೀಯ ಮುಸ್ಲಿಂ ಸಂಘಟನೆಯೊಂದು ಚಚ್‌ರ್‍ ಮತ್ತು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ 250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಬಳಿಕ, ಮುಸ್ಲಿಮರ ಮನೆ, ವಾಹನ, ಅಂಗಡಿಗಳ ಮೇಲೆ ಕ್ರೈಸ್ತರು ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ದಾಳಿ ನಡೆಸಲಾಗುತ್ತಿದೆ.

click me!