'ಭಾರತ ಎಫ್‌-21 ಖರೀದಿಸಿದರೆ ಬೇರಾರಿಗೂ ಆ ವಿಮಾನ ಮಾರಲ್ಲ'

Published : May 14, 2019, 11:00 AM IST
'ಭಾರತ ಎಫ್‌-21 ಖರೀದಿಸಿದರೆ ಬೇರಾರಿಗೂ ಆ ವಿಮಾನ ಮಾರಲ್ಲ'

ಸಾರಾಂಶ

ಭಾರತ ಎಫ್‌-21 ಖರೀದಿಸಿದರೆ ಬೇರಾರಿಗೂ ಆ ವಿಮಾನ ಮಾರಲ್ಲ| ಭಾರತದಲ್ಲೇ ಟಾಟಾ ಜತೆ ಯುದ್ಧವಿಮಾನ ಉತ್ಪಾದಿಸುತ್ತೇವೆ| ರಕ್ಷಣಾ ಉತ್ಪಾದನಾ ಕ್ಷೇತ್ರದ ಪ್ರಗತಿಗೆ ಕೊಡುಗೆ ಕೊಡ್ತೀವಿ| ಅಮೆರಿಕದ ಲಾಕ್‌ಹೀಡ್‌ ಮಾರ್ಟಿನ್‌ ಕಂಪನಿ ಭರ್ಜರಿ ಆಫರ್‌

ನವದೆಹಲಿ[ಮೇ.14]: ರಕ್ಷಣಾ ಪಡೆಗಳನ್ನು ಆಧುನೀಕರಣಗೊಳಿಸಲು 114 ಯುದ್ಧ ವಿಮಾನಗಳನ್ನು ಖರೀದಿಸುವ ಆಲೋಚನೆಯಲ್ಲಿರುವ ಭಾರತಕ್ಕೆ ಅಮೆರಿಕ ಮೂಲದ ಲಾಕ್‌ಹೀಡ್‌ ಮಾರ್ಟಿನ್‌ ಕಂಪನಿ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದೆ.

ಭಾರತ ಏನಾದರೂ 114 ವಿಮಾನಗಳ ಪೂರೈಕೆ ಗುತ್ತಿಗೆಯನ್ನೇ ತನಗೇ ಕೊಟ್ಟರೆ, ಎಫ್‌-21 ಸರಣಿ ಯುದ್ಧ ವಿಮಾನಗಳನ್ನು ಬೇರಾವ ದೇಶಕ್ಕೂ ಮಾರಾಟ ಮಾಡುವುದಿಲ್ಲ. ಟಾಟಾ ಕಂಪನಿ ಜತೆಗೂಡಿ ಭಾರತದಲ್ಲೇ ಈ ವಿಮಾನದ ಅತ್ಯಾಧುನಿಕ ಉತ್ಪಾದನಾ ಘಟಕ ತೆರೆಯುತ್ತೇವೆ. ಭಾರತದ ರಕ್ಷಣಾ ಉತ್ಪಾದನೆಯ ಒಟ್ಟಾರೆ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲು ಸಹಾಯ ಮಾಡುತ್ತೇವೆ ಎಂದು ಆ ಕಂಪನಿ ಘೋಷಿಸಿದೆ. ಈ ವಿಮಾನ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಭಾರತದ 60 ವಾಯುನೆಲೆಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಲಾಕ್‌ಹೀಡ್‌ನ ವ್ಯೂಹಾತ್ಮಕ ಹಾಗೂ ಉದ್ಯಮ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ವಿವೇಕ್‌ ಲಾಲ್‌ ತಿಳಿಸಿದ್ದಾರೆ.

1.26 ಲಕ್ಷ ಕೋಟಿ ರು. ವೆಚ್ಚದಲ್ಲಿ 114 ಯುದ್ಧ ವಿಮಾನಗಳನ್ನು ಖರೀದಿಸುವ ಸಂಬಂಧ ಮಾಹಿತಿ ಅಥವಾ ಆರಂಭಿಕ ಟೆಂಡರ್‌ ಅನ್ನು ಭಾರತೀಯ ವಾಯುಪಡೆ ಕೇಳಿತ್ತು. ವಿಶ್ವದ ಅತಿದೊಡ್ಡ ರಕ್ಷಣಾ ಖರೀದಿ ಪ್ರಕ್ರಿಯೆಗಳಲ್ಲಿ ಇದೂ ಒಂದು ಎಂದು ಬಿಂಬಿತವಾಗಿದೆ. ಅದಕ್ಕೆ ಲಾಕ್‌ಹೀಡ್‌ನಿಂದ ಈ ರೀತಿಯ ಪ್ರತಿಕ್ರಿಯೆ ಬಂದಿದೆ.

ಎಫ್‌-21 ವಿಮಾನವನ್ನು ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಏರ್‌ ಶೋದಲ್ಲಿ ಲಾಕ್‌ಹೀಡ್‌ ಮಾರ್ಟಿನ್‌ ಮೊದಲ ಬಾರಿಗೆ ಅನಾವರಣಗೊಳಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್