ಮೊಬೈಲ್ ಬಳಕೆದಾರರೇ ಗಮನಿಸಿ; ನಿಮ್ಮ ನಂಬರ್ 10 ರಿಂದ 13 ಡಿಜಿಟ್’ಗೆ ಏರಿಕೆಯಾಗಲ್ಲ

By Suvarna Web DeskFirst Published Feb 22, 2018, 10:14 AM IST
Highlights

 ಜುಲೈ 1 ರಿಂದ ದೇಶದ ಎಲ್ಲಾ ಮೊಬೈಲ್ ಸಂಖ್ಯೆಗಳೂ ಈಗಿರುವ 10 ಅಂಕಿಯಿಂದ 13 ಅಂಕಿಗೆ ಬದಲಾಗುತ್ತವೆ ಎಂಬ ಸುದ್ದಿ 2 ದಿನಗಳಿಂದ ಹರಿದಾಡುತ್ತಿದೆ.

ನವದೆಹಲಿ (ಫೆ.21):  ಜುಲೈ 1 ರಿಂದ ದೇಶದ ಎಲ್ಲಾ ಮೊಬೈಲ್ ಸಂಖ್ಯೆಗಳೂ ಈಗಿರುವ 10 ಅಂಕಿಯಿಂದ 13 ಅಂಕಿಗೆ ಬದಲಾಗುತ್ತವೆ ಎಂಬ ಸುದ್ದಿ 2 ದಿನಗಳಿಂದ ಹರಿದಾಡುತ್ತಿದೆ.
ಅದನ್ನು ನೋಡಿ ಮೊಬೈಲ್ ಬಳಕೆದಾರರೆಲ್ಲ ತಮ್ಮ ಮೊಬೈಲ್ ಸಂಖ್ಯೆ ಬದಲಾಗುತ್ತದೆ ಎಂದು ಚಿಂತೆಗೀಡಾಗಿದ್ದಾರೆ. ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ದೂರ ಸಂಪರ್ಕ ಇಲಾಖೆಯು ಎಲ್ಲಾ ಮೊಬೈಲ್ ಸೇವಾ ಪೂರೈಕೆದಾರ ಕಂಪನಿಗಳಿಗೆ ಒಂದು ಸುತ್ತೋಲೆ ಕಳುಹಿಸಿತ್ತು. ಅದರಲ್ಲಿ, ‘ಜುಲೈ 1 ರಿಂದ ಎಂ2ಎಂ ಸಿಮ್'ಗಳಿಗೆ ಈಗಿರುವ 10 ಅಂಕಿಗಳ ಬದಲು 13 ಅಂಕಿಗಳ ಸಂಖ್ಯೆ ನೀಡಲಾಗುವುದು’ ಎಂದು ತಿಳಿಸಿತ್ತು. ಅದನ್ನೇ ತಪ್ಪಾಗಿ ಅರ್ಥೈಸಿಕೊಂಡ ಕೆಲವು ಮಾಧ್ಯಮಗಳು ದೇಶದ ಎಲ್ಲಾ ಮೊಬೈಲ್ ನಂಬರ್‌ಗಳೂ 13 ಅಂಕಿ ಆಗಲಿವೆ ಎಂದು ಸುದ್ದಿ ಹರಿಬಿಟ್ಟಿದ್ದರಿಂದ ಎಡವಟ್ಟಾಗಿದೆ.

ಎಂ2ಎಂ ಸಿಮ್‌ಗಳು ಅಂದರೆ ಸ್ವೈಪ್ ಮಷಿನ್, ಸ್ಮಾರ್ಟ್ ವಿದ್ಯುತ್ ಮೀಟರ್ ಮುಂತಾದ ಉಪಕರಣಗಳಲ್ಲಿ ಬಳಸುವ ಸಿಮ್ ಮೊಬೈಲ್ ಸೇವೆ ಪೂರೈಕೆದಾರ ಕಂಪನಿಗಳು ಇತ್ತೀಚೆಗೆ ವ್ಯಾಪಕವಾಗಿ ಎಂ೨ಎಂ ಸಿಮ್ಗಳನ್ನು ಮಾರಾಟ ಮಾಡುತ್ತಿವೆ. ಇವುಗಳನ್ನು ಆಧಾರವಾಗಿಟ್ಟುಕೊಂಡು ‘ಇಂಟರ್ನೆಟ್ ಆಫ್ ಥಿಂಗ್ಸ್’ (ಇಂಟರ್ನೆಟ್ ಮೂಲಕ ವಸ್ತುಗಳ ನಡುವೆ ಸಂಪರ್ಕ ಕಲ್ಪಿಸುವತಂತ್ರಜ್ಞಾನ) ಎಂಬ ಉದ್ದಿಮೆ ದೇಶದಲ್ಲಿ ಬೆಳೆಯುತ್ತಿದೆ. ಮನೆ ಬಾಗಿಲಿಗೆ ಅಳವಡಿಸುವ ಸ್ಮಾರ್ಟ್ ಲಾಕ್, ಟ್ರಾಫಿಕ್ ಸಿಗ್ನಲ್ ದೂರದಿಂದಲೇ ನಿರ್ವಹಿಸುವ ವ್ಯವಸ್ಥೆ, ಕಾರಿನ ಇಂಧನ ನಿರ್ವಹಣಾ ವ್ಯವಸ್ಥೆ, ಹೀಗೆ ಹಲವಾರು ಸೌಕರ್ಯಗಳು ಇಂಟರ್ನೆಟ್  ಮೂಲಕ ನಿರ್ವಹಣೆಯಾಗುತ್ತಿವೆ. 

click me!