‘ಮಂಪರು ಪರೀಕ್ಷೆಗೂ ನಾನು ರೆಡಿ’: ಶೂಟೌಟ್'ಗೂ ನನಗೂ ಸಂಬಂಧವಿಲ್ಲ ಎಂದ ಶಾಸಕ

Published : Feb 09, 2017, 05:55 PM ISTUpdated : Apr 11, 2018, 12:59 PM IST
‘ಮಂಪರು  ಪರೀಕ್ಷೆಗೂ  ನಾನು ರೆಡಿ’: ಶೂಟೌಟ್'ಗೂ ನನಗೂ ಸಂಬಂಧವಿಲ್ಲ  ಎಂದ ಶಾಸಕ

ಸಾರಾಂಶ

, ಪ್ರಕರಣದಲ್ಲಿ ತಮ್ಮದೇನೂ ಪಾತ್ರವಿಲ್ಲ ವಿನಾಕಾರಣ ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರೌಡಿ ಶೀಟರ್ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಯಲಹಂಕ ಶಾಸಕ ಎಸ್ ಎರ್ ವಿಶ್ವನಾಥ್ ಹೇಳಿದ್ದಾರೆ.

ರೌಡಿ ಶೀಟರ್ ಕಡಬಗೆರೆ ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ  ಅಗ್ನಿ ಶ್ರೀಧರ್, ಬಚ್ಚನ್, ಸೈಲೆಂಟ್ ಸುನೀಲ ಹಾಗೂ ರೋಹಿತ್  ಎಂಬುವವರ ಜೊತೆ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಹೆಸರೂ ಕೂಡ ತಳುಕು ಹಾಕಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇಂದು ಗೃಹ ಸಚಿವ ಪರಮೇಶ್ವರ ಅವರನ್ನು ಭೇಟಿ ಮಾಡಿದ ಶಾಸಕ  ವಿಶ್ವನಾಥ್ ಅವರು, ಪ್ರಕರಣದಲ್ಲಿ ತಮ್ಮದೇನೂ ಪಾತ್ರವಿಲ್ಲ ವಿನಾಕಾರಣ ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಗೃಹಸಚಿವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ವಿಶ್ವನಾಥ್, ಪ್ರಕರಣದಲ್ಲಿ ತಮ್ಮ ಎಳ್ಳಷ್ಟೂ ಪಾತ್ರವಿಲ್ಲ. ಯಾವುದೇ ತನಿಖೆಗೂ ತಾವು ಸಿದ್ಧ. ಬೇಕಿದ್ದರೆ ತಮ್ಮನ್ನು ಮಂಪರು  ಪರೀಕ್ಷೆಗೊಳಪಡಿಸಲು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ