ಗಣ್ಯರ ವಾಟ್ಸಪ್ ಗ್ರೂಪಿನಲ್ಲಿ ಅಶ್ಲೀಲ ಚಿತ್ರಗಳನ್ನು ಹರಿಯಬಿಟ್ಟ ರಾಜ್ಯ ಬಿಜೆಪಿ ಶಾಸಕ

Published : May 02, 2017, 03:01 PM ISTUpdated : Apr 11, 2018, 12:56 PM IST
ಗಣ್ಯರ ವಾಟ್ಸಪ್ ಗ್ರೂಪಿನಲ್ಲಿ ಅಶ್ಲೀಲ ಚಿತ್ರಗಳನ್ನು ಹರಿಯಬಿಟ್ಟ ರಾಜ್ಯ ಬಿಜೆಪಿ ಶಾಸಕ

ಸಾರಾಂಶ

. ‘ನನಗೆ ಬೇರೆ ಗ್ರೂಪ್​ನಿಂದ ಬಂದ ಫೋಟೋ ನೇರವಾಗಿ ರವಾನೆಯಾಗಿದೆ’. ‘ಟಚ್ ಸ್ಕ್ರೀನ್ ಮೊಬೈಲ್​ನಿಂದಾಗಿ ನನ್ನ ಅರಿವಿಗೆ ಬಾರದೆ ರವಾನೆಯಾಗಿದೆ’

ಬೆಳಗಾವಿ(ಮೇ.02): ಹಿರಿಯ ಅಧಿಕಾರಿಗಳು,ರಾಜಕಾರಣಿಗಳು ಹಾಗೂ ಪತ್ರಕರ್ತರಿದ್ದ 50ಕ್ಕೂ ಹೆಚ್ಚು ಗಣ್ಯರ ವಾಟ್ಸಪ್ ಗ್ರೂಪಿನಲ್ಲಿ ಶಾಸಕರೊಬ್ಬರು ಅಶ್ಲೀಲ ಚಿತ್ರ ಕಳಿಸಿದ್ದಾರೆ.

ಗಣ್ಯರು ಇರುವ ಬೆಳಗಾವಿಯ ಮೀಡಿಯಾ ಫೋರ್ಸ್ ಗ್ರೂಪ್​ ಎಂಬ ವಾಟ್ಸಪ್ ಗ್ರೂಪಿನಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅಶ್ಲೀಲ ಚಿತ್ರವನ್ನು ಹರಿಯಬಿಟ್ಟಿದ್ದಾರೆ. ಅಶ್ಲೀಲ ಚಿತ್ರವನ್ನು ನೋಡಿದ ಇತರ ಸದಸ್ಯರು ದಂಗಾಗಿದ್ದಾರೆ. ನಂತರ ಈ ಬಗ್ಗೆ ಪ್ರತಿಕ್ರಯಿಸಿದ ಶಾಸಕ ಮಹಾಂತೇಶ ಕವಟಗಿಮಠ, ‘ನನ್ನ ಮೊಬೈಲ್​ನಿಂದ ತಪ್ಪಾಗಿ ವಾಟ್ಸಪ್ ಗ್ರೂಪ್​ಗೆ ಬಂದಿದೆ’.‘ಉದ್ದೇಶ ಪೂರ್ವಕವಾಗಿ ಕಳುಹಿಸಿದ ಫೋಟೋಗಳಲ್ಲ’. ‘ನನಗೆ ಬೇರೆ ಗ್ರೂಪ್​ನಿಂದ ಬಂದ ಫೋಟೋ ನೇರವಾಗಿ ರವಾನೆಯಾಗಿದೆ’. ‘ಟಚ್ ಸ್ಕ್ರೀನ್ ಮೊಬೈಲ್​ನಿಂದಾಗಿ ನನ್ನ ಅರಿವಿಗೆ ಬಾರದೆ ರವಾನೆಯಾಗಿದೆ’ಎಂದು  ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿ  ಕ್ಷಮೆಯಾಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೋಂಡಿ ಬೀಚಲ್ಲಿ ಗುಂಡಿಗೂ ಮುನ್ನ ಬಾಂಬ್‌ ಎಸೆದಿದ್ದ ಉಗ್ರ ಅಪ್ಪ-ಮಗ
ಪಿಎಸ್‌ಐ ನೇಮಕಾತಿಗೆ ಗೃಹ ಇಲಾಖೆ ರೆಡ್‌ ಸಿಗ್ನಲ್‌: ಎಎಸ್‌ಐಗಳಿಗೆ ಮುಂಬಡ್ತಿ