ಸಂಸದ ಮುನಿಯಪ್ಪ ಪುತ್ರಿ ಶಾಸಕಿ ರೂಪಕಲಾ ವಿರುದ್ಧ ತಿರುಗಿಬಿದ್ದ ಮಹಿಳೆಯರು

First Published Jun 4, 2018, 8:43 PM IST
Highlights

ವಿಧಾನಸಭಾ ಚುನಾವಣೆಗೂ ಮುನ್ನ ಡಿಸಿಸಿ ಬ್ಯಾಂಕ್ ನಿರ್ದೇಶಕಿಯಾಗಿದ್ದ ರೂಪಕಲಾ, ಕ್ಷೇತ್ರದ ಮಹಿಳೆಯರಿಗೆ ಸಾಲ ಕೊಡಿಸಿದ್ದರು. 2018ರ ಚುನಾವಣೆಗೂ ಮುನ್ನ ಸಾಲ ಕೊಡಿಸಿದ್ದ ಅವರು, ತಾವು ಶಾಸಕಿಯಾದ ಬಳಿಕ ಸಾಲವನ್ನು ಮರುಪಾವತಿ ಮಾಡುವ ಅಗತ್ಯವಿಲ್ಲ. ನಾನು ಸಾಲವನ್ನು ಮನ್ನ ಮಾಡುತ್ತೇನೆಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು. ಶಾಸಕಿಯ ಮಾತು ನಂಬಿ ಕ್ಷೇತ್ರದ ಸಾಕಷ್ಟು ಮಹಿಳೆಯರು ಲಕ್ಷಾಂತರ ರುಪಾಯಿ ಡಿಸಿಸಿ ಬ್ಯಾಂಕ್’ನಿಂದ ಸಾಲ ಮಾಡಿದ್ದರು. 

ಕೋಲಾರ[ಜೂ.04]: ಸಂಸದ ಕೆ.ಎಚ್ ಮುನಿಯಪ್ಪ ಪುತ್ರಿ ಕೆ.ಜಿ.ಎಫ್ ಶಾಸಕಿ ರೂಪಕಲಾ ವಿರುದ್ಧ ಕ್ಷೇತ್ರದ ಮಹಿಳೆಯರು ತಿರುಗಿಬಿದ್ದಿದ್ದು, ಮಾತು ತಪ್ಪಿದ ಶಾಸಕಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ ಡಿಸಿಸಿ ಬ್ಯಾಂಕ್ ನಿರ್ದೇಶಕಿಯಾಗಿದ್ದ ರೂಪಕಲಾ, ಕ್ಷೇತ್ರದ ಮಹಿಳೆಯರಿಗೆ ಸಾಲ ಕೊಡಿಸಿದ್ದರು. 2018ರ ಚುನಾವಣೆಗೂ ಮುನ್ನ ಸಾಲ ಕೊಡಿಸಿದ್ದ ಅವರು, ತಾವು ಶಾಸಕಿಯಾದ ಬಳಿಕ ಸಾಲವನ್ನು ಮರುಪಾವತಿ ಮಾಡುವ ಅಗತ್ಯವಿಲ್ಲ. ನಾನು ಸಾಲವನ್ನು ಮನ್ನ ಮಾಡುತ್ತೇನೆಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು. ಶಾಸಕಿಯ ಮಾತು ನಂಬಿ ಕ್ಷೇತ್ರದ ಸಾಕಷ್ಟು ಮಹಿಳೆಯರು ಲಕ್ಷಾಂತರ ರುಪಾಯಿ ಡಿಸಿಸಿ ಬ್ಯಾಂಕ್’ನಿಂದ ಸಾಲ ಮಾಡಿದ್ದರು. 
ಇದೀಗ ರೂಪಕಲಾ ಚುನಾವಣೆಯಲ್ಲಿ ಗೆದ್ದ ನಂತರ ಬ್ಯಾಂಕ್’ನ ಸಿಬ್ಬಂದಿ ಸಾಲ ಪಡೆದ ಹಣವನ್ನು ಕಟ್ಟುವಂತೆ ಮಹಿಳೆಯರ ಮನೆಬಾಗಿಲಿಗೆ ಬಂದು ಹಿಂಸೆ ನೀಡುತ್ತಿದ್ದಾರೆಂದು ಮಹಿಳೆಯರು ಆರೋಪಿಸಿದ್ದು, ಮಾತು ತಪ್ಪಿದ ಶಾಸಕಿ ವಿರುದ್ಧ  ಕ್ಷೇತ್ರದ ಮಹಿಳೆಯರು ತಿರುಗಿಬಿದ್ದಿದ್ದಾರೆ. ನಮ್ಮಲ್ಲಿ ಸಾಲ ಕಟ್ಟಲು ಹಣವಿಲ್ಲ, ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದು ನೊಂದ ಮಹಿಳೆಯರು ತಮ್ಮ ಗೋಳನ್ನು ಹಂಚಿಕೊಂಡಿದ್ದಾರೆ.

click me!