
ಮಂಗಳೂರು(ಫೆ.23): ಮಂಗಳೂರಿನ ಶಾಲೆಯೊಂದಕ್ಕೆ ಸೇರಿದ ಬೃಹತ್ ಮೈದಾನ ಈಗ ವಿವಾದಕ್ಕೀಡಾಗಿದೆ. ಸುರತ್ಕಲ್ ಪ್ರದೇಶದ ಕಾಟಿಪಳ್ಳ ಸರ್ಕಾರಿ ಶಾಲೆಯ ಬಯಲಿನಲ್ಲಿ ಮೈದಾನ ನಿರ್ಮಾಣಕ್ಕೆ ಶಾಲಾಭಿವೃದ್ಧಿ ಮಂಡಳಿ ಅಪಸ್ವರ ಎತ್ತಿದೆ. ಈ ಮೈದಾನದಲ್ಲಿ ಈಜು ಕೊಳ, ಕ್ರೀಡಾಂಗಣ ಇರುವ ಸುಸಜ್ಜಿತ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಆದರೆ ಹಳೇ ಶಾಲೆ ಕೆಡವಿ ಮೈದಾನ ಹಾಗೂ ಈಜುಕೊಳ ನಿರ್ಮಾಣಕ್ಕೆ ಮುಂದಾಗಿರುವ ಮಂಗಳೂರಿನ ಶಾಸಕರೊಬ್ಬರ ವಿರುದ್ಧ ವಿರೋಧ ವ್ಯಕ್ತವಾಗಿದೆ.
ಸುಮಾರು 40 ವರ್ಷ ಹಳೆಯ ಮಂಗಳೂರಿನ ಸುರತ್ಕಲ್ ಪ್ರದೇಶದ ಕಾಟಿಪಳ್ಳ ಸರ್ಕಾರಿ ಶಾಲೆಗೆ ಬೃಹತ್ ಮೈದಾನ ಇದೆ. ಈ ಮೈದಾನ ಬಳಸಿ ಸುಸಜ್ಜಿತ ಕ್ರೀಡಾ ಕಾಂಪ್ಲೆಕ್ಸ್ ಮಾಡುವ ಯೋಜನೆ ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ಅವರದ್ದು ಆದರೆ, ಶಾಸಕರ ಯೋಜನೆಗೆ ಶಾಲಾಭಿವೃದ್ಧಿ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಕ್ಕದಲ್ಲೇ ಇರುವ ಮೈದಾನವನ್ನು ಬಿಟ್ಟು ಈ ಜಮೀನಿನ ಮೇಲೆ ಕೆಂಗಣ್ಣು ಬೀರಿರುವುದು ಸರಿಯಲ್ಲ. ಶಾಲಾ ಕಟ್ಟಡವನ್ನು ಕೆಡವಬಾರದು ಎಂದು ಶಾಲಾಭಿವೃದ್ಧಿ ಮಂಡಳಿ ಹೇಳಿದೆ.
ಆದರೆ, ಶಾಲೆಗೆ ಪ್ರತ್ಯೇಕ ಸುಸಜ್ಜಿತ ಕಟ್ಟಡ ಕಟ್ಟಿದ ಬಳಿಕ ಇಲ್ಲಿ ಮೈದಾನ, ಈಜು ಕೊಳ, ಬ್ಯಾಡ್ಮಿಂಟನ್ ಮತ್ತು ಶಟಲ್ ಕೋರ್ಟ್ ಇರುವ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಶಾಸಕ ಮೊಯ್ದೀನ್ ಬಾವಾ ಭರವಸೆ ನೀಡಿದ್ದಾರೆ.
ಒಟ್ಟಾರೆ, ಶಾಸಕರು ಇತ್ತ ಜನರ ಒಳಿತಿಗಾಗಿ ಇದನ್ನೆಲ್ಲ ಮಾಡುತ್ತಿದ್ದೀನಿ ಎನ್ನುತ್ತಿದ್ರೆ, ಅತ್ತ, ಈ ಯೋಜನೆ ಬೇಡ ಅನ್ನುತ್ತಿದ್ದಾರೆ ಸ್ಥಳೀಯರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.