
ಗಂಗಾವತಿ(ಜ.29): ನಟಿ ಪಂಚಮಿಯನ್ನು ಎರಡನೇ ಮದುವೆಯಾಗಿರವುದನ್ನು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಒಪ್ಪಿಕೊಂಡಿದ್ದಾರೆ. ಇಷ್ಟು ದಿನ ಎರಡನೇ ಮದುವೆ ಬಗ್ಗೆ ಇದ್ದ ಗೊಂದಲಕ್ಕೆ ಇಕ್ಬಾಲ್ ಅನ್ಸಾರಿ ತೆರೆ ಎಳೆದಿದ್ದಾರೆ.
'ನಾನು ಗಂಡಸ್ತನದ ಕೆಲಸ ಮಾಡಿದ್ದೇನೆ, ನಮ್ಮ ಧರ್ಮದಲ್ಲಿ ಒಪ್ಪಿಗೆ ಮೇರೆಗೆ ಇನ್ನೊಂದು ಮದುವೆಯಾಗಬಹುದು. ಇದನ್ನ ಪ್ರಶ್ನಿಸಲು ನೀವ್ಯಾರು ಎಂದು ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿಗೆ ಟಾಂಗ್ ನೀಡಿದ್ದಾರೆ. ಇನ್ನು ನಾನು ಗಂಡಸ್ತನದ ಕೆಲಸ ಮಾಡಿನಿ ಹೊರತು ಸೂಳೆಗಾರಿಕೆ ಕೆಲಸ ಮಾಡಿಲ್ಲ ಎಂದು ಇದೇವೇಳೆ ಕಿಡಿಕಾರಿದ್ದಾರೆ.
ಒಪ್ಪಿಗೆ ಮೇಲೆ ಮದುವೆಯಾಗೋದು ನಮ್ಮ ಧರ್ಮದಲ್ಲಿದೆ. ಒಪ್ಪಿ ಮದುವೆಯಾದ್ರೆ ಅದು ಸೂಳೆಗಾರಿಕೆ ಅಲ್ಲ. ನಿಮ್ಮ ಧರ್ಮದಲ್ಲಿ ಅವಕಾಶ ಇದ್ದರೆ ನೀವು ಹತ್ತ ಜನರನ್ನು ಮದುವೆಯಾಗಿ ನಿಮ್ಮನ್ನು ಬೇಡ ಎಂದೋರು ಯಾರು ಇಕ್ಬಾಲ್ ಅನ್ಸಾರಿ ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.