
ಬೆಂಗಳೂರು (ಮಾ. 01): ವಿದ್ವತ್ ಡಿಸ್ಚಾರ್ಜ್ ವಿಚಾರವಾಗಿ ಮಲ್ಯ ಆಸ್ಪತ್ರೆಯ ವೈದ್ಯರು ಮತ್ತು ವಿದ್ವತ್ ತಂದೆ ಲೋಕನಾಥ್ ನಡುವೆ ವಾಗ್ವಾದ ನಡೆದಿದೆ.
ನಿಮ್ಮ ಮಗ ವಿದ್ವತ್ ಗುಣಮುಖರಾಗಿದ್ದಾರೆ ಡಿಸ್ಟಾರ್ಜ್ ಮಾಡಿಕೊಳ್ಳಿ ಎಂದು ವಿದ್ವತ್ ತಂದೆ ಲೋಕನಾಥ್’ಗೆ ಮಲ್ಯ ಆಸ್ಪತ್ರೆಯ ವೈದ್ಯರು ಒತ್ತಡ ಹಾಕಿದ್ದಾರೆ. ಆದರೆ ನಮ್ಮ ಮಗ ಇನ್ನು ಗುಣಮುಖವಾಗಿಲ್ಲವೆಂದು ಡಿಸ್ಟಾರ್ಜ್ ಮಾಡಿಕೊಳ್ಳಲು ಲೋಕನಾಥ್ ಹಿಂದೇಟು ಹಾಕಿದ್ದಾರೆ.
ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ್ರೆ ನಲಪಾಡ್’ಗೆ ಜಾಮೀನು ಸಿಗುತ್ತೆ ಅನ್ನೋದು ಎಂಎಲ್ಎ ಹ್ಯಾರಿಸ್ ಲೆಕ್ಕಚಾರ. ಹೀಗಾಗಿ ವಿದ್ವತ್ ಡಿಸ್ಟಾರ್ಜ್ ಮಾಡುವಂತೆ ಮಲ್ಯ ಆಸ್ಪತ್ರೆಯ ವೈದ್ಯರಿಗೆ ಶಾಸಕ ಹ್ಯಾರೀಸ್ ಒತ್ತಡ ಹಾಕಿದ್ದಾರೆನ್ನಲಾಗಿದೆ. ಹ್ಯಾರೀಸ್ ಒತ್ತಡಕ್ಕೆ ಮಣಿದು ವಿದ್ವತ್ ಡಿಸ್ಟಾರ್ಜ್ ಮಾಡಿಕೊಳ್ಳುವಂತೆ ಲೋಕನಾಥ್ ಗೆ ಒತ್ತಡ ಹಾಕ್ತಿದ್ದರಾ ಮಲ್ಯ ಆಸ್ಪತ್ರೆಯ ವೈದ್ಯರು? ಎಂಬ ಪ್ರಶ್ನೆ ಎದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.