ಬಿ.ಸಿ ಪಾಟೀಲ್ ಮುಂದಿನ ನಿರ್ಧಾರವೇನು..?

First Published Jun 8, 2018, 9:31 AM IST
Highlights

ಸಚಿವ ಸ್ಥಾನ ಕೈ ತಪ್ಪಿರುವುದು ಬೇಸರ ತರಿಸಿದೆ. ಇನ್ನು ಬೆಂಗಳೂರಿನ ನಾಯಕರಿಗೆ ಮಂಡಿ ಊರಿ ಕೂರುವ ಕಾಲ ಮುಗಿತು. ನಾವು ಉತ್ತರ ಕರ್ನಾಟಕದವರ ಗತ್ತು ಏನು ಎಂಬುದನ್ನು  ನನ್ನ ಹೈಕಮಾಂಡ್ ಆಗಿರುವ ತಾಲೂಕಿನ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಬಿಸಿ ಪಾಟೀಲ್ ತನ್ನ ಅಸಮಾಧಾನ ಹೊರಹಾಕಿದ್ದಾರೆ.

ಹಿರೇಕೆರೂರು: ಸಚಿವ ಸ್ಥಾನ ಕೈ ತಪ್ಪಿರುವುದು ಬೇಸರ ತರಿಸಿದೆ. ಇನ್ನು ಬೆಂಗಳೂರಿನ ನಾಯಕರಿಗೆ ಮಂಡಿ ಊರಿ ಕೂರುವ ಕಾಲ ಮುಗಿತು. ನಾವು ಉತ್ತರ ಕರ್ನಾಟಕದವರ ಗತ್ತು ಏನು ಎಂಬುದನ್ನು ಸೋಮವಾರ ನನ್ನ ಹೈಕಮಾಂಡ್ ಆಗಿರುವ ತಾಲೂಕಿನ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಹೀಗೆ ಕಡ್ಡಿ ಮುರಿದಂತೆ ಹೇಳಿದವರು ಹಾವೇರಿ ಜಿಲ್ಲೆಯ ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಬಿ.ಸಿ.ಪಾಟೀಲ್.

ನಗರದಲ್ಲಿ ಗುರುವಾರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಏಕೈಕ ಶಾಸಕ ನಾನು. ಹಾವೇರಿ, ಗದಗ, ಧಾರವಾಡ ಭಾಗದ ಏಕೈಕ ಲಿಂಗಾಯತ ಕಾಂಗ್ರೆಸ್ ಶಾಸಕ. ಹೀಗಾಗಿ, ಸಚಿವ ಸ್ಥಾನ ಸಿಗುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಅದು ಸುಳ್ಳಾಗಿದೆ. ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಇಷ್ಟು ದಿನ ಅವರು ಹೇಳಿದ ಹಾಗೆ ಕೇಳಿ, ಕೇಳಿ ಸಾಕಾಗಿದೆ ಎಂದರು. 

click me!