
ಮಾಸ್ಕೋ(ಡಿ. 25): ರಷ್ಯಾದ ಸೋಚಿ ನಗರದ ಕಪ್ಪು ಸಮುದ್ರದ ತೀರದಿಂದ ರೇಡಾರ್ ಕಣ್ಣಿಂದ ನಾಪತ್ತೆಯಾಗಿದ್ದ ರಷ್ಯಾದ ಮಿಲಿಟರಿ ವಿಮಾನ ಟಿಯು-154 ಇಂದು ಸಾಗರದಲ್ಲಿ ಪತನಗೊಂಡಿರುವ ಮಾಹಿತಿ ತಿಳಿದುಬಂದಿದೆ. ಈ ರಷ್ಯನ್ ವಿಮಾನದಲ್ಲಿ 91 ಜನರಿದ್ದರೆನ್ನಲಾಗಿದ್ದು, ಎಲ್ಲರೂ ಜಲಸಮಾಧಿಯಾಗಿರುವ ಸಾಧ್ಯತೆ ಇದೆ. ಸೋಚಿ ಸಾಗರ ಪ್ರದೇಶದಲ್ಲಿ ರಷ್ಯಾದ ರಕ್ಷಣಾ ತಂಡವೊಂದು ಘಟನಾ ಸ್ಥಳಕ್ಕೆ ಧಾವಿಸಿದೆ ಎಂದು ಇಂಟರ್'ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ರಷ್ಯಾದ ರಕ್ಷಣಾ ಸಚಿವಾಲಯಕ್ಕೆ ಸೇರಿದ ಟಿಯು-154 ವಿಮಾನದ ಅವಶೇಷಗಳು ಸೋಚಿ ನಗರದಿಂದ 1.5 ಕಿ.ಮೀ ಆಚೆ ಇರುವ ಸಾಗರ ಪ್ರದೇಶದಲ್ಲಿ ಪತ್ತೆಯಾಗಿವೆ. ನೀರಿನಿಂದ 50ರಿಂದ 70 ಮೀಟರ್ ಆಳದಲ್ಲಿ ಈ ಅವಶೇಷಗಳು ಸಿಕ್ಕಿವೆ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ರಷ್ಯಾ ವಿಮಾನ ಪತನಕ್ಕೆ ಖಚಿತ ಕಾರಣಗಳು ಇನ್ನೂ ಗೊತ್ತಾಗಿಲ್ಲ. ತಿಳಿದುಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿರುವ ಶಂಕೆ ಇದೆ ಎಂದು ಆರ್'ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದುರಂತಕ್ಕೀಡಾದ ಈ ವಿಮಾನದಲ್ಲಿದ್ದ 91 ಜನರ ಪೈಕಿ ರಷ್ಯಾದ ಸೇನಾ ಸಿಬ್ಬಂದಿ ಅಷ್ಟೇ ಅಲ್ಲದೇ ಸಂಗೀತಗಾರರು, ಪತ್ರಕರ್ತರೂ ಇದ್ದರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.