
ಮುಖ್ಯಮಂತ್ರಿ ಅಧಿಕೃತ ನಿವಾಸ 'ಅನುಗೃಹ'ದಲ್ಲಿ ಮುಖ್ಯಮಂತ್ರಿ, ಮಂತ್ರಿಯಾದವರು ಒಂದು ಅಧಿಕಾರ ಕಳೆದುಕೊಳ್ಳುತ್ತಾರೆ ಇಲ್ಲವೆ ಮತ್ತೆರಡು ಅಧಿಕೃತ ನಿವಾಸಗಳಾದ 'ಕಾವೇರಿ' ಅಥವಾ 'ಕೃಷ್ಣ'ದಲ್ಲಿ ಇರಲು ಬಯಸುತ್ತಾರೆ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು.
ಆದರೆ ಭೂತಪ್ರೇತಗಳನ್ನು ಅಧ್ಯಯನ ಮಾಡುವ ಪ್ಯಾರಾನಾರ್ಮಲ್ ಪರಿಣಿತರ ಪ್ರಕಾರ 'ಅನುಗೃಹ'ದಲ್ಲಿ ಬೇರೊಂದು ಅಗೋಚರ ಶಕ್ತಿಯಿಂದ ಅಲ್ಲಿ ಇರಬಯಸುವ ಮುಖ್ಯಮಂತ್ರಿ,ಮಂತ್ರಿ ಮಹೋದಯರಿಗೆ ಕಂಟಕ ಎದುರಾಗುತ್ತಿದೆ ಎಂದು. ಇದಕ್ಕೆ ತಮ್ಮದೆ ಸಾಕ್ಷ್ಯಗಳನ್ನು ಸಹ ನೀಡುತ್ತಾರೆ ಇವರು.
ದೆವ್ವ ಓಡಾಡುತ್ತಿದೆಯೇ!
ಇತ್ತೀಚಿಗೆ ಕಾಮಲೀಲೆ ಹಗರಣದಿಂದ ಅಧಿಕಾರ ಕಳೆದುಕೊಂಡ ಹೆಚ್.ವೈ. ಮೇಟಿಯಿಂದ ಹಿಡಿದು ಹೆಚ್.ಡಿ.ದೇವೇಗೌಡ, ಡಿ.ವಿ. ಸದಾನಂದ ಗೌಡ, ಎಸ್.ಆರ್. ಪಾಟೀಲ್ ಅವರು ಅನುಗ್ರಹದಲ್ಲಿ ವಾಸವಿದ್ದ ಕಾರಣ ಬೇಗನೆ ತಮ್ಮ ಅಧಿಕಾರ ಕಳೆದುಕೊಂಡಿದ್ದಾರೆ. ದೇವೇಗೌಡರು ಪ್ರಧಾನಿಯಾದರೂ ಬೆಂಗಳೂರಿಗೆ ಬಂದಾಗ ಅನುಗ್ರಹದಲ್ಲೇ ಉಳಿಯುತ್ತಿದ್ದರು. ಅಲ್ಲಿ ಉಳಿಯುತ್ತಿರುವಾಗಲೇ ಅವರು 11 ತಿಂಗಳಿಗೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.
ಅನುಗ್ರಹವನ್ನು ಅಧಿಕೃತ ವಾಸ ಮಾಡಿಕೊಂಡಿದ್ದ ಡಿ.ವಿ. ಸದಾನಂದ ಗೌಡರು ಸಹ ಒಂದು ವರ್ಷವು ಅಧಿಕಾರವನ್ನು ಅನುಭವಿಸದೆ ರಾಜೀನಾಮೆ ನೀಡಿ ಜಗದೀಶ್ ಶಟ್ಟರ್ ಅವರಿಗೆ ಅಧಿಕಾರ ಹಸ್ತಾಂತರಿಸಬೇಕಾಯಿತು. ಸಚಿವರಾಗಿದ್ದ ಎಸ್.ಆರ್. ಪಾಟೀಲ್ ಕೂಡ ಹೆಚ್ಚು ದಿನ ಅಧಿಕಾರದಲ್ಲಿರಲಿಲ್ಲ. ಮೇಟಿಯವರಿಗಾದದ್ದು ಎಲ್ಲರಿಗೂ ಗೊತ್ತೆಯಿದೆ.
ಕೃಷ್ಣ, ಶೆಟ್ಟರ್, ಹೆಚ್'ಡಿಕೆ,ಬಿಎಸ್'ವೈ ಅತ್ತ ಕಡೆ ತಲೆ ಹಾಕಲಿಲ್ಲ
ಎಸ್.ಎಂ.ಕೃಷ್ಣ, ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಹೆಚ್.ಡಿ.ಕುಮಾರ ಸ್ವಾಮಿ ಅನುಗೃಹದಲ್ಲಿ ವಾಸಿಸದೆ ಅಲ್ಲಿಂದ 500 ಮೀಟರ್ ದೂರದಲ್ಲಿರುವ ಕಾವೇರಿ ಅಥವಾ ಕೃಷ್ಣವನ್ನು ತಮ್ಮ ಅಧಿಕೃತ ನಿವಾಸ ಮಾಡಿಕೊಂಡಿದ್ದರು.
ಭೂತಪ್ರೇತಗಳನ್ನು ಹೆಚ್ಚು ಅಭ್ಯಾಸಿಸುವ ಪ್ಯಾರ ನಾರ್ಮಲ್ ಪರಿಣಿತರಾದ ಅರ್ಚನಾ ಇದಕ್ಕೆ ತಮ್ಮದೆ ಅಭಿಪ್ರಾಯ ಮಂಡಿಸಿದ್ದು, 'ತಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್'ಗಳ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಅನುಗೃಹ'ದ ಸುತ್ತಮುತ್ತ ಪರೀಕ್ಷೆಗೊಳಪಡಿಸಿದಾಗ ಅಗೋಚರ ಶಕ್ತಿ ಓಡಾಡುವ ಚಲನೆ ಕಂಡುಬಂದಿದೆ' ಎಂದಿದ್ದಾರೆ.
ರಾಜಕಾರಣಿಗಳು ತಮ್ಮ ಬೇರೆ ಯಾವುದೋ ಕಾರಣದಿಂದ ಅಧಿಕಾರ ಕಳೆದುಕೊಂಡರೆ ಇಲ್ಲವೆ ವಾಸಸ್ಥಾನ ಬದಲಾಯಿಸಿದರೆ ಅದಕ್ಕೆ ಅಗೋಚರ ಶಕ್ತಿ ಇರುವಿಕೆಯನ್ನು ಕಲ್ಪಿಸುವುದು ಬೇಡ ಎನ್ನುವುದು ವಾಸ್ತವಾಂಶದ ನೆಲೆಗಟ್ಟಿನಲ್ಲಿ ಮಾತನಾಡುವವರ ಅಭಿಪ್ರಾಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.