
ಬೆಂಗಳೂರು (ಫೆ.18): ಸಿಲಿಕಾನ್ ಸಿಟಿ ಮಹಿಳೆಯರಿಗೆ ಸೇಫ್ ಅಲ್ಲಾ, ಮಕ್ಕಳಿಗೆ ಸೇಫ್ ಅಲ್ಲಾ, ನಮಗೆ ರಕ್ಷಣೆ ಕೊಡಿ ಎಂದು ಬೆಂಗಳೂರು ಮಂದಿ ಪೊಲೀಸರ ಮೊರೆ ಹೋಗ್ತಾರೆ. ಆದರೆ ಸಾರ್ವಜನಿಕರನ್ನು ಕಾಯಬೇಕಿದ್ದ ಆರಕ್ಷಕರಿಗೆ ರಕ್ಷಣೆ ಇಲ್ಲದಂತಹ ಸ್ಥಿತಿ ಬೆಂಗಳೂರಿನಲ್ಲಿ ಉದ್ಭವವಾಗಿದೆ.
ಎಂಎಲ್ಸಿಯೊಬ್ಬರ ಗನ್ ಮ್ಯಾನ್ ಆಗಿರುವ ಪೊಲೀಸ್ ಕಾನ್ಸ್ ಟೇಬಲ್ ಪುರುಷೋತ್ತಮ್ ಎಂಬವರು ಕಿಡಿಗೇಡಿಗಳ ಅಟ್ಟಹಾಸಕ್ಕೆ ಈಗ ರಕ್ತಸಿಕ್ತವಾಗಿ ಆಸ್ಪತ್ರೆ ಸೇರಿದ್ದಾರೆ.
ಪುರುಷೋತ್ತಮ್ ನಿನ್ನೆ ಸಂಜೆ ಕರ್ತವ್ಯ ಮುಗಿಸಿ ಮೈಸೂರ್ ರಸ್ತೆ ಪೊಲೀಸ್ ಕ್ವಾಟ್ರಸ್'ನಲ್ಲಿರೋ ಮನೆಗೆ ಹೊರಟಿದ್ದರು. ಈ ವೇಳೆ ವಿನಾಯಕ ಥಿಯೇಟರ್ ಬಳಿಯ ಗಣೇಶ ದೇವಸ್ಥಾನದ ಬಳಿ, ಮೂವರು ಯುವಕರು ಮೂತ್ರ ವಿಸರ್ಜನೆ ಮಾಡ್ತಿದನ್ನು ಕಂಡು ಪುರುಷೋತ್ತಮ್ ಪ್ರಶ್ನಿಸಿದ್ದಾರೆ.
ಮೊದಲೇ ಕುಡಿದ ಮತ್ತಿನಲ್ಲಿದ್ದ ಕಿಡಿಗೇಡಿಗಳು ಪೇದೆ ಜೊತೆಯೇ ವಾಗ್ವಾದ ನಡೆಸಿದ್ದಾರೆ. ಇದನ್ನೆಲ್ಲಾ ಕೇಳೋಕೆ ನೀನ್ ಯಾರು ಅಂತಾ, ಅಲ್ಲೇ ಕೈಗೆ ಸಿಕ್ಕ ಮೊಣಚು ಕಲ್ಲಿನಿಂದ ಪುರುಷೋತ್ತಮ್ ಮುಖ ಮತ್ತು ತಲೆ ಭಾಗಕ್ಕೆ ಜಜ್ಜಿದ್ದಾರೆ. ಈ ಗಲಾಟೆ ನೋಡಿ ಅಕ್ಕಪಕ್ಕದವರು ಬರ್ತಿದ್ದಂತೆ ಪೇದೆ ಬಳಿಯ ಗನ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಗಾಯಗೊಂಡ ಪೇದೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದು ಆಗಮಿಸಿದ ಡಿಸಿಪಿ ಶರಣಪ್ಪ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.