
ಬೆಂಗಳೂರು (ಫೆ.18): ಐದು ದಿನಗಳ ಏರೋ ಇಂಡಿಯಾ ಪ್ರದರ್ಶನಕ್ಕೆ ಇವತ್ತು ಕೊನೆಯ ದಿನ. ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ಆರಂಭದ ಮೂರು ದಿನಗಳು ವ್ಯವಹಾರಿಕ ಉದ್ದೇಶಕ್ಕೆ ರಕ್ಷಣಾ ಕಂಪನಿಗಳ ಪ್ರತಿನಿಧಿಗಳಿಗೆ, ಸೇನಾ ಸಿಬ್ಬಂದಿಗೆ ಮಾತ್ರ ಸೀಮಿತವಾಗಿತ್ತು. ನಿನ್ನೆಯಿಂದ ಸಾರ್ವಜನಿಕರಿಗೆ ಪ್ರವೇಶವಕಾಶ ನೀಡಿದ್ದೇ ತಡ ಜನರ ದಂಡೇ ಹರಿದು ಬರ್ತಿದೆ.
ನಾಲ್ಕನೇ ದಿನ ಯುದ್ಧ ವಿಮಾನಗಳನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಯಲಹಂಕ ವಾಯುನೆಲೆಗೆ ಹರಿದುಬಂದಿತ್ತು. ಬಿಸಿಲನ್ನೂ ಲೆಕ್ಕಿಸದೇ ಸಾವಿರಾರು ಜನರು ಆಗಸದಲ್ಲಿ ಯುದ್ಧ ವಿಮಾಗಳು ಮಾಡಿದ ಮೋಡಿಯನ್ನು ಕಣ್ತುಂಬಿಕೊಂಡರು. ಇನ್ನು ದೇಶದ ಹೆಮ್ಮೆಯ ತೇಜಸ್ ವಿಮಾನದ ನಿರ್ಮಾಣವನ್ನು ವರ್ಷಕ್ಕೆ 16ಕ್ಕೆ ಹೆಚ್ಚಿಸಲು ಎಚ್ ಎ ಎಲ್ ನಿರ್ಧರಿಸಿದೆ.
ಇವತ್ತು ವೀಕೆಂಡ್ ಬೇರೆ, ಸದಾ ಕೆಲಸದ ಒತ್ತಡದಲ್ಲಿದ್ದವರು ಭೇಟಿ ಕೊಟ್ಟು ಲೋಹದ ಹಕ್ಕಿಗಳ ಹಾರಾಟ ಕಣ್ತುಂಬಿಕೊಳ್ಳಬಹುದು. ಫ್ಯಾಮಿಲಿ ಜೊತೆಗೆ ತೇಜಸ್ ಹಾರಾಟ, ಸಾರಂಗ್ ಹೆಲಿಕಾಪ್ಟರ್ ಸಾಹಸ, ರಫೇಲ್ ಯುದ್ಧ ವಿಮಾನಗಳ ಪ್ರದರ್ಶನ ನೋಡಿ ಎಂಜಾಯ್ ಮಾಡಬಹುದು.
ಒಟ್ಟಿನಲ್ಲಿ ಏರೋ ಇಂಡಿಯಾಗೆ ಇಂದು ವರ್ಣ ರಂಜಿತ ತೆರೆ ಬೀಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಾಯುನೆಲೆಗೆ ಜನ ಹರಿದುಬರುವ ನಿರೀಕ್ಷೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.