ನೀರು ಕಣ್ಣೀರು: ಶಾಲೆ ಬಿಟ್ಟು ಬಿಂದಿಗೆ ಹಿಡಿದ ಚಿಕ್ಕೋಡಿ ಮಕ್ಕಳು

By Suvarna Web DeskFirst Published Feb 18, 2017, 2:00 AM IST
Highlights

ಹೆಣ್ಣು ಮಕ್ಕಳು ಸೈಕಲ್'​ಗಳಲ್ಲಿ ನೀರು ತುಂಬಿಕೊಂಡು ಬರುವ ದೃಶ್ಯ ಇಲ್ಲಿ ಸರ್ವೇಸಾಮಾನ್ಯ. ನೀರು ಎಲ್ಲಿ ಸಿಗುತ್ತೋ ಅಲ್ಲಿಗೆ ಹುಡುಕಿಕೊಂಡು ಅಲೆಯಬೇಕು.  ಸ್ಕೂಲಿಗೆ ಹೋಗುವ ಮಕ್ಕಳು ಶಾಲೆ ಬಿಟ್ಟು ಬಿಂದಿಗೆ ಹಿಡಿದುಕೊಂಡು ಹೊರಟಿದ್ದಾರೆ.

ಚಿಕ್ಕೋಡಿ (ಫೆ.18): ಇದು ದುರಂತದ ಪರಮಾವಧಿ ಅಂದರೂ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ, ಇವರಿಗೆ ನೀರಿನ ವಿಚಾರದಲ್ಲಿ ಸಿಕ್ಕಿರೋದು ಭರವಸೆ ಮಾತ್ರ, ನೀರಲ್ಲ.

ನೀರು ಕಣ್ಣೀರು ಅಭಿಯಾನದಲ್ಲಿ ಚಿಕ್ಕೋಡಿಯ ಕೆಲವು ಊರುಗಳ ಜನರ ಸಂಕಷ್ಟ ಕೇಳಿದಾಗ ಎದೆ ಝಲ್ ಎನ್ನುತ್ತೆ. ಆ ಜನ ಇಷ್ಟೆಲ್ಲ ಪರದಾಟ, ಸಂಕಟದ ನಡುವೆ ಬದುಕುತ್ತಿದ್ದಾರೆ ಎನ್ನುವುದೇ ಅಚ್ಚರಿ.

ಬರ ಅನ್ನೋದು ಅಧಿಕಾರಿಗಳಿಗೆ ವರ, ಜನರಿಗೆ ಶಾಪ ಎಂಬುವುದು ಇನ್ನೊಂದ್ಸಲ ಸಾಬೀತಾಗಿರೋದು ಚಿಕ್ಕೋಡಿಯಲ್ಲಿ. ಇದು ಚಿಕ್ಕೋಡಿ ತಾಲೂಕಿನ ಕಬ್ಬುರ, ಬಂಬಲವಾಡ, ನಾಗರ ಮುನ್ನೋಳಿ ಮೊದಲಾದ ಊರುಗಳ ರೈತರ ಕಣ್ಣೀರಿನ ಕಥೆ. ಹಾಗಂತ ಇಲ್ಲಿ ಸರ್ಕಾರವೇ ಇಲ್ಲ ಅಂತೇನೂ ಇಲ್ಲ. ಆದರೆ, ಸರ್ಕಾರದವರು ಭರವಸೆ ಕೊಡುತ್ತಿದ್ದಾರೆಯೇ ಹೊರತು, ಕೆಲಸ ಮಾಡ್ತಿಲ್ಲ.

ಈ ಊರುಗಳಲ್ಲಿ ಟ್ಯಾಂಕುಗಳಿವೆ, ನೀರು ತೊಟ್ಟಿಕ್ಕುತ್ತಿದೆ, ಆದರೆ ಆ ನೀರು ಬಿಂದಿಗೆ ತುಂಬಲ್ಲ.

ಹೆಣ್ಣು ಮಕ್ಕಳು ಸೈಕಲ್'​ಗಳಲ್ಲಿ ನೀರು ತುಂಬಿಕೊಂಡು ಬರುವ ದೃಶ್ಯ ಇಲ್ಲಿ ಸರ್ವೇಸಾಮಾನ್ಯ. ನೀರು ಎಲ್ಲಿ ಸಿಗುತ್ತೋ ಅಲ್ಲಿಗೆ ಹುಡುಕಿಕೊಂಡು ಅಲೆಯಬೇಕು.  ಸ್ಕೂಲಿಗೆ ಹೋಗುವ ಮಕ್ಕಳು ಶಾಲೆ ಬಿಟ್ಟು ಬಿಂದಿಗೆ ಹಿಡಿದುಕೊಂಡು ಹೊರಟಿದ್ದಾರೆ.

ದುರಂತ ಇರೋದೇ ಇಲ್ಲಿ. ಜನಪ್ರತಿನಿಧಿಗಳೇ ಅಸಹಾಯಕತೆ ವ್ಯಕ್ತಪಡಿಸಿದರೆ ಜನ ಎಲ್ಲಿಗೆ ಹೋಗಬೇಕು. ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕು? ಈ ಜನ ಕುಡಿಯೋಕೆ ನೀರಿಲ್ಲದೆ ಸಾಯಬೇಕಾ? ಬೇಸಗೆ ಕದ ತಟ್ಟುತ್ತಿದೆ, ಭೂಮಿ ಬಿಕ್ಕುತ್ತಿದೆ, ಬೋರ್​ವೆಲ್​ಗಳು ಬತ್ತಿ ಹೋಗಿವೆ. ಇನ್ನು ಬೇಸಿಗೆಯ ಭೀಕರತೆ ಹೇಗಿರುತ್ತೋ ಏನೋ..

ವರದಿ: ಚಿಕ್ಕೋಡಿಯಿಂದ ಮುಸ್ತಾಕ್ ಪೀರಜಾದೆ

click me!