ಮಹಿಳೆ ಎದುರು ಹಸ್ತ ಮೈಥುನ : ಬಾಲಕ ಸೆರೆ

Published : Sep 09, 2018, 09:51 AM ISTUpdated : Sep 09, 2018, 10:27 PM IST
ಮಹಿಳೆ ಎದುರು ಹಸ್ತ ಮೈಥುನ : ಬಾಲಕ ಸೆರೆ

ಸಾರಾಂಶ

ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡು ವಿಕೃತಿ ಮೆರೆದ ಬಾಲಕನೋರ್ವನನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. 

ಬೆಂಗಳೂರು :  ಮನೆ ಬಳಿ ರಂಗೋಲಿ ಹಾಕುತ್ತಿದ್ದ ಮಹಿಳೆ ನಿಂತು 16 ವರ್ಷದ ಬಾಲಕನೊಬ್ಬ ಹಸ್ತಮೈಥುನ ಮಾಡಿಕೊಂಡು ವಿಕೃತವಾಗಿ ವರ್ತಿಸಿರುವ ಘಟನೆ ಮಡಿವಾಳದಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ಬಾಲಕನ ವಿರುದ್ಧ ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

ಉತ್ತರ ಭಾರತ ಮೂಲದ ಮಹಿಳೆ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಮಹಿಳೆ ಪತಿ ಜತೆ ಮಡಿವಾಳದ ಕಾವೇರಿ ಕನ್ವೆಂಟ್‌ ಸಮೀಪದ ವಿ.ಪಿ.ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸೆ.6ರಂದು ಮಹಿಳೆಯ ಪತಿ ಕೆಲಸಕ್ಕೆ ಹೋಗಿದ್ದರು. ಮಹಿಳೆ ಮಧ್ಯಾಹ್ನ 12.35ರ ಸುಮಾರಿಗೆ ಮನೆಯ ಬಾಲ್ಕನಿಯಲ್ಲಿ ರಂಗೋಲಿ ಬಿಡಿಸುತ್ತಿದ್ದರು. ಈ ವೇಳೆ ನೆರೆ ಮನೆ ನಿವಾಸಿ ಬಾಲಕ ಮಹಿಳೆ ನೋಡುತ್ತಾ ಪ್ಯಾಂಟ್‌ ಬಿಚ್ಚಿ ಹಸ್ತ ಮೈಥುನ ಮಾಡಿಕೊಂಡು ವಿಕೃತವಾಗಿ ವರ್ತಿಸಿದ್ದಾನೆ.

ಬಾಲಕನ ವರ್ತನೆ ನೋಡಿ ಮಹಿಳೆ ಮನೆ ಒಳಗೆ ಹೋಗಿದ್ದಾರೆ. ಬಳಿಕ ಪತಿ ಜತೆ ಬಂದು ಠಾಣೆಗೆ ದೂರು ನೀಡಿದ್ದಾರೆ. ಬಾಲಕ ಈ ಹಿಂದೆ ಮಹಿಳೆ ಮನೆ ಎದುರು ನಿಂತು ಮದ್ಯ ಹಾಗೂ ಧೂಮಪಾನ ಸೇವಿಸಿ ಅಸಭ್ಯವಾಗಿ ವರ್ತಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಮಹಿಳೆ ನೀಡಿದ ದೂರು ಆಧಾರಿಸಿ ಬಾಲಕನನ್ನು ಬಂಧಿಸಿ, ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪದೇಪದೆ 'ನಮ್ಮಪ್ಪನೇ ಸಿಎಂ..' ಯತೀಂದ್ರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ? ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಕರ್ನಾಟಕ ವಿಧಾನಸಭೆಯಲ್ಲಿ ಎರಡು ಮಹತ್ವದ ವಿಧೇಯಕ ಮಂಡನೆ, ಉದ್ದೇಶಗಳು ಮತ್ತು ಕಾರಣಗಳು ಯಾವುವು?