ಪ್ರತಿದಿನ ಜೆಡಿಎಸ್ ಕಚೇರಿಗೆ ಮಂತ್ರಿಗಳ ಭೇಟಿ

By Web DeskFirst Published Jul 29, 2018, 8:30 AM IST
Highlights

ಜೆಡಿಎಸ್ ಕಚೇರಿ ಪ್ರತಿದಿನವೂ ಕೂಡ ಸಚಿವರು ಭೇಟಿಯು ಕಡ್ಡಾಯವಾಗಿದೆ. ಪಕ್ಷದ ಕಾರ್ಯಕರ್ತರ, ನಾಯಕರ ಸಮಸ್ಯೆಗಳನ್ನು ಆಲಿಸಲು ಜೆಡಿಎಸ್‌ನ ಸಚಿವರು ಆಗಸ್ಟ್ ತಿಂಗಳಲ್ಲಿ ಪ್ರತಿದಿನ ಒಬ್ಬೊಬ್ಬರಂತೆ ಪಕ್ಷದ ಕಚೇರಿ ಜೆ.ಪಿ.ಭವನಕ್ಕೆ ಆಗಮಿಸಲಿದ್ದಾರೆ. 

ಬೆಂಗಳೂರು : ಪಕ್ಷದ ಕಾರ್ಯಕರ್ತರ, ನಾಯಕರ ಸಮಸ್ಯೆಗಳನ್ನು ಆಲಿಸಲು ಜೆಡಿಎಸ್‌ನ ಸಚಿವರು ಆಗಸ್ಟ್ ತಿಂಗಳಲ್ಲಿ ಪ್ರತಿದಿನ ಒಬ್ಬೊಬ್ಬರಂತೆ ಪಕ್ಷದ ಕಚೇರಿ ಜೆ.ಪಿ.ಭವನಕ್ಕೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಸೇರಿದಂತೆ ಎಲ್ಲಾ ಸಚಿವರು ಜೆ.ಪಿ.ಭವನದಲ್ಲಿ ರಜೆದಿನಗಳನ್ನು ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಲಭ್ಯವಾಗಲಿದ್ದಾರೆ. 

ಈ ವೇಳೆ ಸಚಿವರ ಬಳಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದಾಗಿದೆ. ಇತ್ತೀಚೆಗಷ್ಟೇ ಪಕ್ಷದ ಕಾರ್ಯಕರ್ತರು ತಮ್ಮ ಅಳಲನ್ನು ತೋಡಿಕೊಳ್ಳಲು ವಿಧಾನಸೌಧಕ್ಕೆ ಅಲೆದಾಡಲು ಸಾಧ್ಯವಿಲ್ಲ, ಹೀಗಾಗಿ ಸಚಿವರು ಪಕ್ಷದ ಕಚೇರಿಗೆ ಆಗಮಿಸಿ ಕಾರ್ಯಕರ್ತರೊಂದಿಗೆ ಚರ್ಚಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಜೆಡಿಎಸ್ ವರಿಷ್ಠರು ಇದೀಗ ಪಕ್ಷದ ಕಚೇರಿಗೆ ತೆರಳಿ ಕಾರ‌್ಯಕರ್ತರ ಮನವಿಯನ್ನು ಸ್ವೀಕರಿಸುವಂತೆ ಸೂಚನೆ ನೀಡಿದ್ದಾರೆ. ಸಚಿವರು ಪಕ್ಷದ ಕಾರ್ಯಕರ್ತರಿಗೆ ಸ್ಪಂದಿಸಲಿದ್ದಾರೆ. 

click me!